ಉಪನ್ಯಾಸಕ ವೇಷದ ಏಜೆಂಟರುಗಳು

ಬಳಕೆದಾರರ ವೇದಿಕೆಯ ಕೆಲಸವನ್ನು ನಾನು ಅಲ್ಪ ಸ್ವಲ್ಪ ಮಾಡುತ್ತೇನೆ. ಇತ್ತೀಚೆಗೆ ಗೃಹಿಣಿಯೊಬ್ಬರು ವೇದಿಕೆಗೆ ಬಂದರು. ಆಕೆ ಪರಿಚಯದವರೇ. ಇದಕ್ಕಿಂತ ಮೊದಲೂ ಒಂದು ಸಲ ಮುಕ್ತ ವಿಶ್ವವಿದ್ಯಾನಿಲಯದಿಂದ ಅಂಕಪಟ್ಟಿ ಬಂದಿಲ್ಲ ಎಂಬ ಸಮಸ್ಯೆಯ ಪರಿಹಾರಕ್ಕಾಗಿ ಬಂದಿದ್ದರು. ಇಂದೂ ಬರುವ ಮೊದಲೇ ಫೋನಿಸಿದ್ದರು. ಹಾಗಾಗಿ ಆಕೆ ಬರುತ್ತಿರುವುದು ಯಾಕೆಂದು ನನಗೆ ಸ್ವಲ್ಪ ಮಟ್ಟಿಗೆ ಅಂದಾಜಿತ್ತು.ಆಕೆ ಎರಡು ಚಿಕ್ಕ ಮಕ್ಕಳ ತಾಯಿ. ಮೊದಲನೆಯ ಹೆಣ್ಣು ಮಗುವಿಗೆ ಈಗ ನಾಲ್ಕು ವರ್ಷ. ಎರಡನೆಯದು ತುಂಬಾ ಚಿಕ್ಕದು.ಆಕೆಯ ಪತಿ ನನಗೆ ಪರಿಚಯದವರೇ. ಅವರಿಗೆ ಪಿತ್ರಾರ್ಜಿತವಾಗಿ

Read more