ಪಂಪಭಾರತ ಆಶ್ವಾಸ ೪ (೮೦-೮೬)

  ಮ|| ಮೃಗಭೂಋದ್ಧ  ವಿಳಾಸಿನೀ ಕಬರಿಕಾ ಬಂಧಂಗಳಂ ಪೊ[ಕ್ಕು] ಮ ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ| ದುಗಳೊಳ್ ನಾಂದು ಕುರುಳ್ಗಳೊಳ್ ಸುೞಿದು ಮುಂದೊಂದಿರ್ದ ಸೌಭಾಗ್ಯ ಘಂ ಟೆಗಳೊಂದಿಂಚರದೊಳ್ ಪಳಂಚಿ ಸುೞಿದತ್ತಂದೊಂದು ಮಂದಾನಿಳಂ|| ೮೦ || ಮೃಗಭೂ ಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊಕ್ಕು, ಮಲ್ಲಿಗೆಯೊಳ್ ಭಾವಿಸಿ, ಧೂಪದೊಳ್ ಪೊರೆದು, ತತ್ಕಾಂತಾ ರತಿ ಸ್ವೇದ ಬಿಂದುಗಳೊಳ್ ನಾಂದು, ಕುರುಳ್ಗಳೊಳ್ ಸುೞಿದು, ಮುಂದೆ ಒಂದಿರ್ದ ಸೌಭಾಗ್ಯ ಘಂಟೆಗಳ ಒಂದು ಇಂಚರದೊಳ್ ಪಳಂಚಿ ಸುೞಿದತ್ತು ಅಂದು

Read more