ಅನುಮತಿ ಇಲ್ಲದ ಕಟ್ಟಡ: ಪುರಸಭೆಯ ಕ್ರಮ ಏನು? ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಮಂಗಳೂರು ಎಸ್. ಇ. ಜಡ್. ಕಂಪೆನಿಯದೆಂದು ಹೇಳಲಾದ ಬೃಹತ್ ಕಟ್ಟಡವನ್ನು ಅನುಮತಿ ಪುರಸಭೆಯ  ಇಲ್ಲದೆಯೇ ನಿರ್ಮಿಸಲಾಗಿದೆಯೆ? ಹೌದೆಂದು ಕೆಲವು ಪುರಸಭಾ ಸದಸ್ಯರು ಅವರಾಗಿಯೇ ನನ್ನ ಹತ್ತಿರ ಹೇಳಿದ್ದಿದೆ. “ನೀವು ಪುರಸಭಾ ಸದಸ್ಯರು. ನೀವೇ ಏನಾದರೂ ಮಾಡಬೇಕಲ್ಲ?” ಎನ್ನುವ ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಈವರೆಗೂ ಸಿಕ್ಕಿಲ್ಲ. ಸುಮಾರು ಎರಡು ವರ್ಷದಿಂದ ಈ ಬಗ್ಗೆ ಸುಮ್ಮನಿದ್ದ ನನಗೆ ಇತ್ತೀಚೆಗೆ “ನೋಡೋಣ, ಇದೇನು ವಿಷಯ” ಎನಿಸಿದ್ದರಿಂದ ಪುರಸಭೆಗೆ ಮಾಹಿತಿ … Read more

ಬಿ.ಸಿ.ರೋಡಿಗೊಂದು ಸಭಾಭವನ: ಇದ್ದಿದ್ದೂ ಹೋಯ್ತು ಮದ್ದಿನ ಗುಣದಿಂದ! ಅಡುಗೆ ಅನಿಲದ ಸಭೆಯ ಕುರಿತಾಗಿ ಬರೆಯುವಾಗ ನಮ್ಮೂರಿಗೊಂದು ಸಭಾಭವನ ಇಲ್ಲದಿರುವುದನ್ನೂ ಪ್ರಸ್ತಾವಿಸಿದ್ದೆ. ಈಗ ಇದ್ದಿದ್ದನ್ನೂ ಕಳಕೊಂಡು ಪೆದ್ದಂಬಟ್ಟಗಳಾದ ನಮ್ಮ ಕತೆಯನ್ನು ವ್ಯಥೆಯಿಂದಲೇ ಹೇಳಬೇಕಾಗಿದೆ. ಹಿಂದಿನ ಒಂದು ಪ್ರಸಂಗ ಚತುಷ್ಪಥ ರಸ್ತೆ ಆಗುವ ಮೊದಲು ಬಿ.ಸಿ.ರೋಡು ಕೈಕಂಬದಲ್ಲಿ ಮಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಒಂದು ಬಸ್ ತಂಗುದಾಣವಿತ್ತು. ರಸ್ತೆಯ ಕೆಲಸ ಪ್ರಾರಂಭವಾಗುವ ಎರಡು ವರ್ಷಗಳ ಮೊದಲೇ ಈ ಬಸ್ ತಂಗುದಾಣವನ್ನು ಅವಸರವಸರವಾಗಿ  ಕೆಡವಿ ಹಾಕಿದರು. ರಸ್ತೆಯ ಕೆಲಸ ಮುಗಿದು ನಾಲ್ಕೈದು ವರ್ಷಗಳೇ … Read more

ನಮ್ಮೂರಿನಲ್ಲೊಂದು ಅಡುಗೆ ಅನಿಲ ಬಳಕೆದಾರರ ಸಭೆ ನಿನ್ನೆ ೧೨/೩/೧೫ರಂದು ನಮ್ಮ ಬಂಟ್ವಾಳದಲ್ಲಿ ಅಡುಗೆ ಅನಿಲದ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಭೆ ನಡೆಯಿತು. ಒಂದು ತಿಂಗಳ ಹಿಂದೆ ಇಂಥದೇ ಒಂದು ಸಭೆ ನಡೆದಿತ್ತು. ಇನ್ನು ಮೇಲೆ ಮೂರು ತಿಂಗಳಿಗೊಮ್ಮೆ ನಡೆಯುತ್ತದೆಯಂತೆ. ಇದು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಎಂದು ಸುದ್ದಿ. ಸಂಘಟಿಸಿದ್ದು ತಾಲೂಕು ಕಛೇರಿ. ಭಾಗವಹಿಸಿದ್ದು ಆಹಾರ ಇಲಾಖೆಯ ಉಪನಿರ್ದೇಶಕ ಶರಣ ಬಸಪ್ಪ, ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ದಿನಕರ ತೋನ್ಸೆ, ಭದ್ರಾ ಗ್ಯಾಸ್ ಏಜೆನ್ಸಿ ಪರವಾಗಿ ಮಂಜುನಾಥ್ … Read more

ನೇತ್ರಾವತಿಯ ಮಡಿಲಲ್ಲಿ ಬಂಟ್ವಾಳದ ಜನತೆಕುಡಿಯುವ ನೀರಿಗೆ ಯಾಕೀ ಕೊರತೆ? ರಸ್ತೆಯಂಚಿನಲ್ಲೊಂದು ಕೊಳವೆ ಬಾವಿ ಮೊಡಂಕಾಪಿನಲ್ಲಿರುವ ನಮ್ಮ ಮನೆಗೆ ಹೋಗಲು ಬಿ.ಸಿ.ರೋಡು ಪೊಳಲಿ ದ್ವಾರದ ಮೂಲಕ ಹೋಗಬೇಕು. ಇದು ನಾನು ನಿತ್ಯ ತಿರುಗಾಡುವ ದಾರಿ. 2014ರ ಡಿಸೆಂಬರ್ ಮಧ್ಯದ ಒಂದು ದಿನ ಇದ್ದಕ್ಕಿದ್ದಂತೆ ಕಾರ್ಮೆಲ್ ಕಾನ್ವೆಂಟ್ ಹತ್ತಿರ ರಸ್ತೆಯ ಬದಿಯಲ್ಲಿ ಒಂದು ಕೊಳವೆ ಬಾವಿ  ಕಾಣಿಸಿಕೊಂಡಿತು. ಬಾವಿ ತೀರ ರಸ್ತೆಯ ಅಂಚಿನಲ್ಲೇ ಇತ್ತಾದ್ದರಿಂದ ಇದು ಯಾರಪ್ಪ ರಸ್ತೆಗೆ ಇಷ್ಟು ಹತ್ತಿರ ಈ ಕೆಲಸ ಮಾಡಿದವರು ಎಂಬ ಪ್ರಶ್ನೆ ಮನಸ್ಸಿಗೆ … Read more