ಪಂಪಭಾರತ ಆಶ್ವಾಸ ೨ ಪದ್ಯಗಳು ೫೫ರಿಂದ ೭೩ ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ– (ಎಂಬುದುಂ ಆ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನ್ ಏಱಿಸಿಕೊಂಡು ಕುಂಭಸಂಭವಂ ಗಾಂಗೇಯನನ್ ಇಂತೆಂದಂ) ಹಾಗೆಂದಾಗ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೆ ಕೂರಿಸಿಕೊಂಡು ದ್ರೋಣನು ಭೀಷ್ಮನ ಹತ್ತಿರ ಹೀಗೆ ಹೇಳಿದನು. ಕಂ|| ಇನಿಬರೊಳಗೀತನೊರ್ವನೆ ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ| ಕಿನಿಸದಿರಿಂ ಮುನ್ನಱಿಪಿದೆ ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ || ೫೫ || (‘ಇನಿಬರೊಳಗೆ ಈತನೊರ್ವನೆ ಧನುರಾಗಮದ … Read more