ಪಂಪಭಾರತ ಆಶ್ವಾಸ ೧ ಪದ್ಯಗಳು ೧೨೮ರಿಂದ ೧೪೯

ಕಂ|| ಭೀಮಂ ಭಯಂಕರಂ ಪೆಱ |      ತೇ ಮಾತೀ ಕೂಸಿನಂದಮೀತನ ಪೆಸರುಂ ||      ಭೀಮನೆ ಪೋಗೆನೆ ಮುನಿಜನ |      ಮೀಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ ||೧೨೮|| (“ಭೀಮಂ ಭಯಂಕರಂ, ಪೆಱತೇ ಮಾತು? ಈ ಕೂಸಿನಂದಂ ಈತನ ಪೆಸರುಂ ಭೀಮನೆ! ಪೋಗು” ಎನೆ ಮುನಿಜನಂ, ಈ ಮಾೞ್ಕೆಯಿನ್ ಆಯ್ತು ಶಿಶುಗೆ ಪೆಸರ್ ಅನ್ವರ್ಥಂ.) ‘ಇವನ ಸ್ವರೂಪವು ಹೆದರಿಕೆ ಹುಟ್ಟಿಸುವಂತಿದೆ! ಬೇರೇನು ಹೇಳುವುದು? ಈತನ ಹೆಸರು ಭೀಮ ಎಂದಾಗಲಿ’ ಎಂದು ಮುನಿಜನರು ಹೇಳಿದರು. ಹೀಗಾಗಿ ಆ … Read more

ಪಂಪಭಾರತ ಆಶ್ವಾಸ ೧ ಪದ್ಯಗಳು ೧೧೫-೧೨೭

ಖಚರ ಪ್ಲುತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ |      ಭಂಗಮಂ ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ ||      ತ್ತುಂಗಮಂ ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂ |      ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ ||೧೧೫|| (ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ, ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ, ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಂ, ನೃಪನ್ ಎಯ್ದಿದನ್ ಉದ್ಯಚ್ಛೃಂಗಮನ್ ಆ ಶತಶೃಂಗಮಂ.) … Read more