ಮೌನೀಶರ ಜೋಕುಗಳು

ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:“ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?”ಮೌನೀಶರ ಉತ್ತರ: “ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!”***ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ … Read more

ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ  ಕುಂಟೆ ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಕೇಸು ಕೋರ್ಟಿಗೆ ಒಯ್ದರು ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ … Read more