Month: May 2018

Untitled

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧೫-೪೩ ಕಂ|| ಶ್ರೀಮಚ್ಚುಳಕ್ಯ ವಂಶ |      ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ ||      ಡೀ ಮಹಿಯೊಳಾತ್ಮ ವಂಶ ಶಿ |      ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ ||೧೫|| (ಶ್ರೀಮತ್ ಚಳುಕ್ಯ ವಂಶ ವ್ಯೋಮ ಅಮೃತ ಕಿರಣನ್ ಎನಿಪ ಕಾಂತಿಯನ್ ಒಳಕೊಂಡು, ಈ ಮಹಿಯೊಳ್ ಆತ್ಮ ಶಿಖಾಮಣಿ ಜಸಂ ಎಸೆಯೆ ಯುದ್ಧಮಲ್ಲಂ ನೆಗೞ್ದಂ.) ಇಲ್ಲಿಂದ ಮುಂದಕ್ಕೆ ಅರಿಕೇಸರಿಯ ವಂಶವೃತ್ತಾಂತ: ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನಂತೆ, ಆ ವಂಶದ ಶಿಖಾಮಣಿಯಂತೆ, ಈ ಭೂಮಿಯಲ್ಲಿ ಯುದ್ಧಮಲ್ಲನು

Read more

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧-೧೪

ಶ್ರೀಃ ಪಂಪಕವಿ ವಿರಚಿತಂ ವಿಕ್ರಮಾರ್ಜುನ ವಿಜಯಂ ಪ್ರಥಮಾಶ್ವಾಸಂ  ಉ|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ |      ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ||      ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ |      ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ ||೧|| (ಶ್ರೀಯನ್ ಅರಾತಿ ಸಾಧನ ಪಯೋನಿಧಿಯೊಳ್ ಪಡೆದುಂ, ಧರಿತ್ರಿಯಂ ಜೀ ಎನೆ ಬೇಡಿ ಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿ ಕೊಂಡುಂ, ಆತ್ಮೀಯ ಸುಪುಷ್ಪಪಟ್ಟಮನ್ ಒಡಂಬಡೆ ತಾಳ್ದಿಯುಂ, ಇಂತು ಉದಾತ್ತ ನಾರಾಯಣನಾದ

Read more