ಮೂರನೇ ಆಶ್ವಾಸ ಪದ್ಯಗಳು: ೨೮-೩೨

  ಕಂ|| ದಾಡೆಗಳನರೆಯೊಳಿಂಬಿಂ      ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|      ನೋಡುತ್ತಿರ್ದಾ ಬಕನಂ      ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮|| (ದಾಡೆಗಳನ್ ಅರೆಯೊಳ್ ಇಂಬಿಂ ತೀಡುತ್ತುಂ, ತೀವ್ರಮಾಗೆ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ) ಹರಿತಗೊಳಿಸಲೆಂದು ತನ್ನ ಕೋರೆಹಲ್ಲನ್ನು ಸಾವಕಾಶವಾಗಿ ಬಂಡೆಗೆ ಮಸೆಯುತ್ತಾ, ಅದು ಹರಿತಗೊಂಡಮೇಲೆ, ಬಂಡಿಯು ಬರುವುದನ್ನೇ ಎದುರುನೋಡುತ್ತಿದ್ದ ಬಕನನ್ನು, ಸಾಕಷ್ಟು ದೂರದಿಂದಲೇ ಕಂಡು ಭೀಮನು ಕೆರಳಿದನು. ಕಂ| ಕಡೆಗಣ್ಣೊಳೆ ರಕ್ಕಸನಂ      ನಡೆ ನೋಡಿ … Read more