ಪಂಪಭಾರತ ಆಶ್ವಾಸ ೨ ಪದ್ಯಗಳು ೩೦ರಿಂದ ೪೦ ಕಂ|| ಒಡನಾಡಿಯುಮೊಡನೋದಿಯು|     ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ||     ಪೊಡೆಸೆಂಡೆಂಬಿವನಾಡು|     ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್||೩೦||  (ಒಡನೆ ಆಡಿಯುಂ, ಒಡನೆ ಓದಿಯುಂ, ಒಡನೆ ಬಳೆದುಂ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡುಂ, ಪೊಡೆಸೆಂಡುಂ ಎಂಬಿವನ್ ಆಡುತ್ತ ಒಡನೆ ಬಳೆದರ್ ತಮ್ಮೊಳ್ ಎಳಸೆ ತಂತಂ ಗೆಡೆಗಳ್) ಒಟ್ಟಾಗಿ ಆಡುತ್ತ, ಓದುತ್ತ, ಬೆಳೆಯುತ್ತ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡು, ಪೊಡೆಸೆಂಡು ಎಂಬಂಥ ಮಕ್ಕಳಾಡುವ ಆಟಗಳನ್ನು ಆಡುತ್ತ ಅವರೆಲ್ಲ ತಮ್ಮೊಳಗೆ ಸ್ನೇಹದಿಂದ ಒಟ್ಟಿಗೆ ಬೆಳೆಯುತ್ತಿದ್ದರು.ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು … Read more