ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು

ಬಹಳ ದಿನಗಳಿಂದಲೂ ಎತ್ತಿನಹೊಳೆ ಯೋಜನೆಯ ಕುರಿತು ಒಂದು ಲೇಖನವನ್ನು ಬರೆಯಬೇಕೆಂದು ಯೋಚಿಸುತ್ತಲೇ ಇದ್ದೇನೆ. ದಾಖಲೆಗಳ ಕೊರತೆಯಿಂದಾಗಿ ಬರೆಯುವುದನ್ನು ಮುಂದೆ ಹಾಕುತ್ತಲೇ ಬಂದೆ.  ಆದರೆ ಈಗ, ದಾಖಲೆಗಳ ಸಂಗ್ರಹ ಮುಗಿಯುವ ಕೆಲಸವಲ್ಲ ಎನ್ನಿಸುತ್ತಿದೆ. ಹಾಗಾಗಿ ಇನ್ನೂ  ತಡಮಾಡುವುದು ಬೇಡ,  ಇರುವಷ್ಟು ದಾಖಲೆಗಳನ್ನು ಆಧರಿಸಿ ಬರೆದುಬಿಡುವುದು, ಮುಂದೆ ದಾಖಲೆಗಳು ಸಿಕ್ಕಿದರೆ, ಅವನ್ನು ಸೇರಿಸಬಹುದು ಎಂದುಕೊಂಡು ಬರೆಯುತ್ತಿದ್ದೇನೆ. ಎತ್ತಿನಹೊಳೆಯಿಂದ ನೀರು ಸಾಗಿಸುವ ಯೋಜನೆಗೆ ಮೂಲಕಾರಣ ಮನುಷ್ಯನ ದುರಾಸೆ ಮತ್ತು ಮೂರ್ಖತನ; ಮೂಲಪ್ರೇರಣೆ ಜಿ.ಎಸ್. ಪರಮಶಿವಯ್ಯನವರ ನೇತ್ರಾವತಿ ತಿರುವು ಯೋಜನೆ. ಮೂಲಸಮಸ್ಯೆ ಇರುವುದು … Read more

ನೇತ್ರಾವತಿಯ ನೀರು: ಕೊಟ್ಟದ್ದು ಸಾಲದು – ಇನ್ನೂ ಕೊಡಿ-ಮಂಗಳೂರು ಎಸ್ ಇ ಜಡ್ ಕಂಪೆನಿ ಈಗಾಗಲೇ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ (ನೇತ್ರಾವತಿ 12.5 + ಗುರುಪುರ 2.5) ನೀರೆತ್ತಲು ಅನುಮತಿ ಪಡೆದಿರುವ ಎಂ ಎಸ್ ಇ ಜಡ್ ಕಂಪೆನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಮೊದಲೇ ನೇತ್ರಾವತಿ ನದಿಯಿಂದ ಒಟ್ಟು 27 ಎಂಜಿಡಿ ನೀರೆತ್ತಲು ಸರಕಾರದ ಮುಂದೆ ಹೊಸ ಬೇಡಿಕೆ ಮಂಡಿಸಿದೆ.(1 ಎಂಜಿಡಿ= ದಿನಕ್ಕೆ 45 ಲಕ್ಷ ಲೀಟರು).ಕಂಪೆನಿ ಈ ಬೇಡಿಕೆಯನ್ನು … Read more