3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ” ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ … Read more

ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ

(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ “ನೀರ ನಿಲುತಾಣ”ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು.” ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. “ಅವಧಿ”ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು … Read more