ಪಂಪಭಾರತ ಆಶ್ವಾಸ ೪ ಪದ್ಯಗಳು ೫೩ರಿಂದ ೬೪
ವ|| ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯಾಗ್ರದೊಳೆ ಸಿರಿಯೋಲಗಂಗೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು- (ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದ ಎರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯ ಅಗ್ರದೊಳೆ ಸಿರಿ ಓಲಗಂ ಕೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು) ಹಾಗೆ ಸೊಗಯಿಸುವ ಅಚ್ಚ ಬೆಳದಿಂಗಳಿನಲ್ಲಿ, ಸುಣ್ಣ ಬಳಿದು ಬಿಳಿಯಾಗಿಸಿದ ಎತ್ತರವಾದ ಉಪ್ಪರಿಗೆಯ ಎರಡನೇ ಹಂತದ ಹಜಾರದ ಎದುರಿನ ಸೊಗಸಾದ ಉಪ್ಪರಿಗೆಯಲ್ಲಿ ವೈಭವದ ಓಲಗ ಕೊಟ್ಟು, ಅರ್ಜುನನೊಂದಿಗೆ ಪಟ್ಟಾಂಗ … Read more