ನೇತ್ರಾವತಿಯ ಬಾಯಿಗೆ ಮಣ್ಣು ಹಾಕಿದ ರೈಲ್ವೆ ಇಲಾಖೆ!

ಧಿಡೀರ್ ಮಣ್ಣಿನ ಸೇತುವೆ! ಕಳೆದ ತಿಂಗಳಿನಲ್ಲಿ  ಬೆಂಗಳೂರಿಗೆ ಹೋಗಿದ್ದ ನಾನು ನನ್ನ ಪತ್ನಿ ಒಂದು ಶುಕ್ರವಾರದ ಹಗಲು ರೈಲಿನಲ್ಲಿ ಬಿ.ಸಿ.ರೋಡಿಗೆ ಹಿಂದೆ ಬಂದೆವು. ಮುಸ್ಸಂಜೆಯ ಹೊತ್ತಿಗೆ ರೈಲು ಬಂಟ್ವಾಳ ಮುಟ್ಟುವ ಹೊತ್ತಿಗೆ ಬಂಟ್ವಾಳ ಸ್ಟೇಷನ್ನಿನ ಸಮೀಪದ ಸೇತುವೆಯಿಂದ  ಕಾಣುವ ಸುಮನೋಹರ ದೃಶ್ಯಕ್ಕಾಗಿ ಕಾಯುತ್ತಿದ್ದ ನನಗೆ ಸೇತುವೆಯ ಕೆಳಗೆ ನದಿಯ ಉದ್ದಕ್ಕೂ  ಮಣ್ಣು ತುಂಬಿಸಿರುವುದು ಕಾಣಿಸಿತು. ಇದ್ಯಾವ ಬುದ್ಧಿವಂತರಪ್ಪ ನಮ್ಮೂರಿನ ನದಿಗೆ ಮಣ್ಣು ತುಂಬಿಸಿದವರು ಅಂತ ಹೊಟ್ಟೆ ತೊಳಸಿತು.ಮರುದಿನ ಕುತೂಹಲಕ್ಕಾಗಿ ಕ್ಯಾಮರಾ ಹಿಡಿದುಕೊಂಡು ಹಳಿಯ ಮೇಲೆ ನಡೆಯುತ್ತ ನದಿಯ ಹತ್ತಿರ

Read more