ಪಂಪಭಾರತ ಆಶ್ವಾಸ ೧ ಪದ್ಯಗಳು ೭೫-೮೫ ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ |      ದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋ ||      ತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತಮೀಗಳಬ್ಬೆಯೆಂ |      ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೋ ಪಂಕಜಾನನೇ ||೭೫|| (ಅತ್ತ ಸುರೇಶ್ವರಾವಸಥಂ, ಇತ್ತ ಮಹೀತಳಂ, ಉತ್ತ ಪನ್ನಗೋದಾತ್ತ ಸಮಸ್ತ ಲೋಕಂ ಅಱಿದಂತಿರೆ ಪೂಣ್ದ  ಎನಗೆ, ಆಗದು ಅಂಗಜ ಉತ್ಪತ್ತಿ ಸುಖಕ್ಕೆ ಸೋಲಲ್ ಅೞಿಗುಂ ಪುರುಷವ್ರತಂ ಈಗಳ್ ಅಬ್ಬೆಯೆಂದು  ಅತ್ತಿಗೆಯೆಂಬ ಮಾತನ್ ಎನಗೇನ್ ಎನಲ್ ಅಕ್ಕುಮೋ ಪಂಕಜಾನನೇ?) ಅತ್ತ … Read more

ಪಂಪಭಾರತ ಆಶ್ವಾಸ ೧

ಪಂಪಭಾರತ ಆಶ್ವಾಸ ೧ ಪದ್ಯಗಳು: ೫೯ರಿಂದ ೭೪ ಕಂ|| ಜಳರುಹನಾಭನ ನಾಭಿಯ |      ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ ||      ಲ್ಲುಳಿತಾಳಿ ಜಲ[ಜ]ಮಾಯ್ತಾ |      ಜಳ[ಜ]ದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ ||೫೯|| (ಜಳರುಹನಾಭನ ನಾಭಿಯ ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋಲ್ಲುಳಿತಾಳಿ ಜಲಜಮಾಯ್ತು, ಆ  ಜಳಜದೊಳ್ ಒಗೆದಂ ಹಿರಣ್ಯಗರ್ಭ ಬ್ರಹ್ಮಂ.) ಹೊಕ್ಕುಳುಗಮಲನ (ವಿಷ್ಣುವಿನ) ಹೊಕ್ಕುಳಿನಲ್ಲಿದ್ದ ನೀರಿನ ಗುಳ್ಳೆಯಲ್ಲಿ ಸುರಭಿಯ ಪರಿಮಳದಿಂದ ಕೂಡಿದ, ದುಂಬಿಗಳು ಮುತ್ತಿ ಅಲುಗುತ್ತಿರುವ ಕಮಲವು ಉಂಟಾಯಿತು. ಆ ಕಮಲದಲ್ಲಿ ಹಿರಣ್ಯಗರ್ಭ … Read more

ಪಂಪಭಾರತಂ ಎಂಬ ವಿಕ್ರಮಾರ್ಜುನವಿಜಯಂ ಆಶ್ವಾಸ ೧ ಪದ್ಯಗಳು ೪೪ರಿಂದ ೫೮ ಕಂ|| ರುಂದ್ರಾಂಬೋಧಿಪರೀತ ಮ |      ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ ||      ದಿಂದ್ರಂ ತಾನೆನೆ ಸಲೆ ನೆಗ |      ೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ ||೪೪|| (ರುಂದ್ರ ಅಂಬೋಧಿಪರೀತ ಮಹೀಂದ್ರರ್ ಅದಾರ್ ಇನ್ನರ್? ಈ ನರೇಂದ್ರಂ ಸಾಕ್ಷಾತ್ ಇಂದ್ರಂ ತಾನ್ ಎನೆ ಸಲೆ ನೆಗೞ್ದು, ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ.) ಕಡಲಿನವರೆಗೂ ವ್ಯಾಪಿಸಿರುವ ಈ ಭೂಮಿಯಲ್ಲಿ ಅರಿಕೇಸರಿಯಂಥ ರಾಜರು ಬೇರೆ ಯಾರು ತಾನೇ … Read more