ಪಂಪಭಾರತ ಆಶ್ವಾಸ ೩ ಪದ್ಯಗಳು ೩೩ರಿಂದ ೪೨

  ಮ|| ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಮುಗ್ರಾರಿ ವಂ ಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತದ್ದ್ರೌಪದೀ| ಲಲನಾವ್ಯಾಜದಿನೀಗಳೊಂದೆ ಪೊೞಲೊಳ್ ಸಂದಿರ್ದ ಭಾಸ್ವತ್ಸುಹೃ ದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ|| ೩೩|| (ತಲೆಯೊಳ್ ಸೀರೆಯನ್ ಇಕ್ಕಿ ಕೆಮ್ಮನೆ ಎನಿತಂ ಪೂಣ್ದಿರ್ಪಂ? ಉಗ್ರ ಅರಿ ವಂಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತತ್ ದ್ರೌಪದೀಲಲನಾವ್ಯಾಜದಿನ್ ಈಗಳ್ ಒಂದೆ ಪೊೞಲೊಳ್ ಸಂದಿರ್ದ ಭಾಸ್ವತ್ ಸುಹೃತ್ ಬಲಕಂ, ಮಾರ್ವಲಕಂ, ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ’) ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು (ಎಂದರೆ ಗುರುತು ಮರೆಸಿಕೊಂಡು) ಇನ್ನೂ

Read more