Month: July 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪ ಕಂ|| ಕೂರಿ[ಸೆ] ಗುರುಶುಶ್ರೂಷೆಯೊ |      ಳಾ ರಾಮನನುಗ್ರ ಪರಶುಪಾಟಿತ ರಿಪು ವಂ ||      ಶಾರಾಮನನಿಷು ವಿದ್ಯಾ |      ಪಾರಗನೆನಿಸಿದುದು ಬಲ್ಮೆ ವೈಕರ್ತನನಾ ||೧೦೪|| ತನ್ನ ಉಗ್ರವಾದ ಕೊಡಲಿಯಿಂದ ವೈರಿಗಳ ವಂಶವನ್ನೇ ನಾಶ ಮಾಡಿದ ಪರಶುರಾಮನಿಗೆ ಪ್ರೀತಿ ಹುಟ್ಟುವಂತೆ ಕರ್ಣನು ಆತನ ಸೇವೆ ಮಾಡಿ ಬಿಲ್ವಿದ್ಯೆಯಲ್ಲಿ ಪಾರಂಗತನಾದನು. (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನನ್, ಉಗ್ರ ಪರಶುಪಾಟಿತ ರಿಪು ವಂಶಾರಾಮನನ್, ಇಷು ವಿದ್ಯಾ ಪಾರಗನ್ ಎನಿಸಿದುದು ಬಲ್ಮೆ

Read more

Untitled

ಪಂಪಭಾರತ ಆಶ್ವಾಸ ೧ ಪದ್ಯಗಳು ೮೬-೧೦೩ ವ|| ಅಂತು ದಿವ್ಯ ಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞಾಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗ ಸಂಗತನುಮನೇಕ ಭದ್ರ ಲಕ್ಷಣ ಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಮಂಬಿಕೆಯ ಸೂೞಾಯ್ತೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಿಂದಾಕೆಯ

Read more