ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

  ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್- ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು, ಈತನುಂ ಎಮ್ಮಂದಿಗನುಂ ಎಮ್ಮ ನಂಟನುಂ  ಅಕ್ಕುಂ ಎಂದು ಮುಗುಳ್ನಗೆ ನಗುತ್ತುಂ ಬರ್ಪನ್‌ ಒಂದೆಡೆಯೊಳ್ ಎಂದು ತನ್ನೊಳಗೇ ಹಲುಬುತ್ತಿದ್ದವನನ್ನು ಕಂಡು ʼಓಹೋ! ಇವನೂ ನಮ್ಮ ಥರದವನೇ! ನಮ್ಮ ನೆಂಟನೇ ಸೈ!ʼ ಎಂದು ಮುಗುಳ್ನಗೆ ನಗುತ್ತಾ ಬರುತ್ತಿರುವಾಗ ಒಂದು ಕಡೆಯಲ್ಲಿ ಚಂ|| ಒಲವಿನೊಳಾದ ಕಾಯ್ಪು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ ದಲಳೞುತುಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ

Read more