ಆಶ್ವಾಸ ೪ ಪದ್ಯಗಳು ೬೫ರಿಂದ ೭೯

  (ಈ ಭಾಗದಲ್ಲಿ ಬರುವ ಅನೇಕ ಪದ್ಯಗಳನ್ನು ಅರ್ಥ ಮಾಡುವುದು ಕಷ್ಟ. ಕೆಲವು ಕಡೆ ವಿರುದ್ಧಾರ್ಥ ಬರುವಂಥ ಮಾತುಗಳೂ ಇವೆ. ಎಲ್‌. ಬಸವರಾಜು ಅವರು ೪ನೇ ಆಶ್ವಾಸದ ೬೩ನೇ ಪದ್ಯದ ನಂತರದ ಭಾಗವನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಇಲ್ಲಿಯೂ ಕೆಲವು ಪದ್ಯಗಳಿಗೂ, ಗದ್ಯಭಾಗಗಳಿಗೂ ಅರ್ಥ ಹೇಳಿಲ್ಲ ಎಂಬುದನ್ನು ವಾಚಕರು/ಕೇಳುಗರು ಗಮನಿಸಬೇಕಾಗಿ ಕೋರಿಕೆ.) ವ|| ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಿಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ

Read more