ಪಂಪಭಾರತ ಆಶ್ವಾಸ ೪ ಪದ್ಯಗಳು ೩೨ರಿಂದ ೪೨

ಖಪ್ಲು|| ಸಾರ ವಸ್ತುಗಳಿಂ ನೆರೆದಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ| ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨|| ಸಾರ ವಸ್ತುಗಳಿಂ ನೆರೆದ ಅಂಭೋರಾಶಿಯೆ ಕಾದಿಗೆ, ಕಾವನುಂ ಸೀರಪಾಣಿ, ವಿಳಾಸದಿನ್‌ ಆಳ್ದಂ ಚಕ್ರಧರಂ, ಬಗೆವಂಗೆ ಸಂಸಾರಸಾರಂ ಇದು ಎಂಬುದನ್‌ ಎಂದು ಎಯ್ತಂದನ್‌ ಅಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್‌ ದ್ವಾರವತೀಪುರಮಂ ನರಂ ರಸವತ್ತಾದ ವಸ್ತುಗಳಿಂದ ತುಂಬಿದ ಕಡಲೇ ಅಗಳು; ಕಾಯುವವನು ನೇಗಿಲನ್ನು ಹಿಡಿದ ಬಲರಾಮ; ಸೊಗಸಾಗಿ ಆಳುವವನು ಚಕ್ರಪಾಣಿಯಾದ

Read more