ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨

ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨ ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨ ವ|| ಆಗಿ ಮಱುದಿವಸಂ ನೇಸಱ್ ಮೂಡೆ- ನಂತರ ಮರುದಿನ ನೇಸರು ಮೂಡಲು ಕಂ|| ತಂತಮ್ಮ ರಾಜ್ಯ ಚಿಹ್ನಂ ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ| ತಂತಮ್ಮೆಸೆವ ವಿಳಾಸಂ ತಂತಮ್ಮಿರ್ಪೆಡೆಯೊಳೋಳಿಯಿಂ ಕುಳ್ಳಿರ್ದರ್|| ೪೩|| (ತಂತಮ್ಮ ರಾಜ್ಯ ಚಿಹ್ನಂ, ತಂತಮ್ಮ ಮಹಾ ವಿಭೂತಿ, ತಂತಮ್ಮ ಬಲಂ, ತಂತಮ್ಮ ಎಸೆವ ವಿಳಾಸಂ     ತಂತಮ್ಮ ಇರ್ಪ ಎಡೆಯೊಳ್ ಓಳಿಯಿಂ ಕುಳ್ಳಿರ್ದರ್) ತಾವಿದ್ದ ಜಾಗದಲ್ಲಿ ತಮ್ಮ ರಾಜ್ಯಚಿಹ್ನೆ,

Read more