ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31 ಚಂ||    ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ| ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧|| (ಇದು ಮಳಯಾಚಳಂ, ಮಳಯಜಂ ಮಳಯಾನಿಳನ್‌ ಎಂದು ಪೆಂಪುವೆತ್ತುದು ಸಿರಿಕಂಡಮುಂ, ಪದೆದು ತೀಡುವ ಗಾಳಿಯುಂ; ಇಲ್ಲಿ ಪುಟ್ಟಿ ಪೋಗದು ಪೊಸ ಸುಗ್ಗಿ; ಮೂಗುವಡದು ಇಲ್ಲಿಯ ಕೋಗಿಲೆ; ಬಂದಮಾವು ಬೀಯದು; ಕುಸುಮಾಸ್ತ್ರನ ಆಜ್ಞೆ ತವದು

Read more