ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ

ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ … Read more

ಕೆಂಪುಕಲ್ಲೆಂಬ ಮೈಸೂರುಪಾಕು!

ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು … Read more

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು … Read more