ಪಂಪಭಾರತ ಆಶ್ವಾಸ ೪ ಪದ್ಯಗಳು ೧ರಿಂದ ೯

ಕಂ||     ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳುದಗ್ರ ಭುಜ ವಿಜಯ ಮಹಾ| ಮೇರುವಿನೆ ಕಡೆದು ಪಡೆದಳ ವಾರುಮನಿೞಿಸಿದುದುದಾತ್ತನಾರಾಯಣನಾ ||೧|| (ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ ವಿಜಯ ಮಹಾಮೇರುವಿನೆ ಕಡೆದು ಪಡೆದ ಅಳವು, ಆರುಮನ್‌ ಇೞಿಸಿದುದು ಉದಾತ್ತನಾರಾಯಣನಾ) ಲಕ್ಷ್ಮಿಯನ್ನು ಶತ್ರುಸೈನ್ಯವೆಂಬ ಕಡಲಿನಲ್ಲಿ ತನ್ನ ತೋಳುಗಳೆಂಬ ಮೇರುಪರ್ವತದಿಂದ ಕಡೆದು ಪಡೆದ ಉದಾತ್ತ ನಾರಾಯಣನ (ಅರ್ಜುನನ) ಪರಾಕ್ರಮವು ಯಾರ ಪರಾಕ್ರಮವನ್ನೂ ಕಡಿಮೆ ಮಾಡುವಂತಿತ್ತು. (ಟಿಪ್ಪಣಿ: ಇಲ್ಲಿ ಒಂದನೇ ಆಶ್ವಾಸದ ಮೊದಲನೇ ಪದ್ಯವನ್ನು ನೆನಪಿಸಿಕೊಳ್ಳಬೇಕು. ಅದರಲ್ಲಿ ವಿಷ್ಣುವಿನ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ 

Read more