Year: 2010

ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ

ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ

Read more

ಕೆಂಪುಕಲ್ಲೆಂಬ ಮೈಸೂರುಪಾಕು!

ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು

Read more

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು

Read more

ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?

ಅಭಿವೃದ್ಧಿ:ಕಾಲ ಮೇಲೆ ಕಲ್ಲು ಕಳೆದ ಜುಲೈ ತಿಂಗಳ 24ನೇ ತಾರೀಖಿನಂದು ಮಂಗಳೂರು ಎಸ್ ಇ ಝಡ್ ಕಂಪೆನಿ ಉದಯವಾಣಿಯಲ್ಲಿ “ನೇತ್ರಾವತಿ ನದಿಯಿಂದ ನೀರು ಸಾಗಿಸುವ ಕಾಮಗಾರಿ”ಗೆ ಒಂದು ಟೆಂಡರ್ ಕರೆದಿದೆ. ಈ ಟೆಂಡರಿನ ಒಂದು ಪ್ರಮುಖ ಲಕ್ಷಣ “Bidding is open to all contractors / firms, both Indian and foreign firms……”. ಎಂದರೆ ಭಾರತದ ಅಥವಾ ವಿದೇಶದ ಯಾವುದೇ ಗುತ್ತಿಗೆದಾರರು ಈ ಕಾಮಗಾರಿಯನ್ನು ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಭಿವೃದ್ಧಿಯ ದ್ಯೋತಕವಾಗಿರುವ ಈ ಮತ್ತು

Read more

ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?

ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?ದಿನಾಂಕ 24-7-2010ರ ಉದಯವಾಣಿಯಲ್ಲಿ ಮಂಗಳೂರು ಎಸ್ ಇ ಝಡ್ ಕಂಪೆನಿಯು ಒಂದು ಜಾಹೀರಾತು ನೀಡಿ ನದಿನೀರು ಸಾಗಣೆಗೆ ಪೈಪುಗಳನ್ನು ಅಳವಡಿಸಲು ಒಂದು ಜಾಗತಿಕ ಟೆಂಡರನ್ನು ಆಹ್ವಾನಿಸಿದೆ. ಈ ಜಾಹೀರಾತಿನಲ್ಲಿ ಯಾವ ನದಿಯಿಂದ, ಯಾವ ಜಾಗದಿಂದ ಇತ್ಯಾದಿ ಯಾವ ವಿವರಗಳೂ ಇಲ್ಲ. ಈ ಕಾಮಗಾರಿಯ ಸಂಪೂರ್ಣ ವಿವರಗಳು ಬೇಕಾದಲ್ಲಿ ನೀವು ಕಂಪೆನಿಗೆ ರೂ. 25,000/- ಹಣ ಕೊಟ್ಟು ಬಿಡ್ಡಿಂಗ್ ಫಾರ್ಮುಗಳನ್ನು ಪಡೆದುಕೊಳ್ಳಬೇಕು!ನೀರಿಗೇನು ವ್ಯವಸ್ಥೆ?ಎಸ್ ಇ ಝಡ್ ಕಂಪೆನಿಗೆ ನೇತ್ರಾವತಿ ಹಾಗೂ

Read more

ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?

ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. “ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?” ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ “ನಿಮ್ಮ ಕಾನೂನು ನಿಮಗಿರಲಿ……” ಲೇಖನದಲ್ಲಿ “ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ” ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ

Read more

ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!

ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ “ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ

Read more

ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ…….

ಎಪ್ರಿಲ್ ೮ರಂದು “ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ…..” ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:.ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. “ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ” ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು

Read more

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: “ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ

Read more

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ……

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:………”ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ

Read more