ಪಂಪಭಾರತ ಆಶ್ವಾಸ ೨ ಪದ್ಯಗಳು ೮೭-೯೮
ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ| ಡವರನಕಾರಣಂ ಕೆಣಕಿದೀ ಪೊಸ ಪೊೞ್ತಱೊಳಾದ ಕಿರ್ಚು ಕೌ ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭ || (ಅವರ್, ಇವರ್, ಅನ್ನರ್, ಇನ್ನರ್ ಎನವೇಡ, ಅರಿಕೇಸರಿಗೆ ಆಂಪನ್ ಇಲ್ಲ, ಮೀಱುವ ತಲೆದೋರ್ಪ ಗಂಡರ್ ಅಣಂ ಇಲ್ಲ, ಎಡೆಯೊಳ್ ಗೆಡೆವಚ್ಚುಗೊಂಡು ಪಾಂಡವರನ್ ಅಕಾರಣಂ ಕೆಣಕಿದ ಈ ಪೊಸ ಪೊೞ್ತಱೊಳ್ ಆದ ಕಿರ್ಚು, ಕೌರವರ್ಗೆ ಇದು ನಾಡೆಯುಂ ತಿಣುಕನ್ ಆಗಿಸದೆ ಏಂ … Read more