ಆಶ್ವಾಸ ೩ ಪದ್ಯಗಳು ೨೧-೨೭ ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ| ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧|| (ಬರಿಸಿ ಹಿಡಿಂಬೆಯಂ, ಕರೆದು ಸಾರೆ ಘಟೋತ್ಕಚನಂ, ‘ಮನೋಮುದಂ ಬೆರಸು ಒಸೆದು ಇರ್ದೆವು ಇನ್ನೆವರಂ, ಇನ್ನು ಇರಲಾಗದು, ಪೋಪೆವು’ ಎಂದೊಡೆ, ಆದರದೊಳೆ ಕೊಟ್ಟ ವಸ್ತುಗಳನೊಂದುಮನ್ ಒಲ್ಲದೆ, ಕೂರ್ತು ಬುದ್ಧಿ ಪೇೞ್ದು, ಇರಿಸಿ, ಸುಖಪ್ರಯಾಣದೊಳೆ ಪಾಂಡವರ್ ಎಯ್ದಿದರ್ ಏಕಚಕ್ರಮಂ) (ಪಾಂಡವರು) ಹಿಡಿಂಬೆಯನ್ನು ಕರೆಸಿಕೊಂಡು, ಘಟೋತ್ಕಚನನ್ನು … Read more