ಪಂಪಭಾರತ ಆಶ್ವಾಸ ೪ ಪದ್ಯಗಳು ೧೧-೨೦
ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು- (ಅಂತು ಅಜಾತಶತ್ರು, ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ, ವಿಶ್ವ ವಿಶ್ವಂಭರ ಆಧಾರಂ ಅಪ್ಪ ಅರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪ ಅನ್ನೆಗಂ, ವಿಕ್ರಾಂತತುಂಗನ್ ಒಂದು ಎಡೆಯೊಳ್ ಇರ್ಪ ಇರವಿಂಗೆ ಉಮ್ಮಳಿಸಿ, ದಿಗಂಗನಾ ಮುಖ ಅವಲೋಕನಂಗೆಯ್ಯಲ್ ಬಗೆದು) ಹಾಗೆ, ಶತ್ರುಗಳೇ ಇಲ್ಲದ ಧರ್ಮರಾಯನು, ಶತ್ರುಗಳ ಪಾಲಿಗೆ, ಸರ್ಪದ ಬಾಯಲ್ಲಿರುವ ಭಯಂಕರ ವಿಷದ ಹಲ್ಲುಗಳಂತಹ … Read more