ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦
ಕಂ|| ಶ್ರೀ ವೀರಶ್ರೀ ಕೀರ್ತಿ ಶ್ರೀ ವಾಕ್ಶ್ರೀಯೆಂಬ ಪೆಂಡಿರಗಲದೆ ತನ್ನೊಳ್| ಭಾವಿಸಿದ ಪೆಂಡಿರೆನಿಸಿದ ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧|| ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್ಶ್ರೀಯೆಂಬ ಪೆಂಡಿರ್ ಅಗಲದೆ ತನ್ನೊಳ್ ಭಾವಿಸಿದ ಪೆಂಡಿರ್ ಎನಿಸಿದ ಸೌವಾಗ್ಯದ ಹರಿಗನ್ ಎಮ್ಮನ್ ಏನ್ ಒಲ್ದಪನೋ ಸಂಪತ್ತು, ಶೌರ್ಯ, ಕೀರ್ತಿ, ನುಡಿ ಎಂಬ ಮಡದಿಯರನ್ನು ತನ್ನ ಸಹಜವಾದ ಮಡದಿಯರಾಗಿ ಪಡೆದ ಭಾಗ್ಯಶಾಲಿಯಾದ ಅರ್ಜುನನು ನಮ್ಮನ್ನೇನು (ನನ್ನನ್ನೇನು) ಒಲಿಯುತ್ತಾನೆಯೇ? ಕಂ||ಎಂಬ ಬಗೆಯೊಳ್ ಸುಭದ್ರೆ ಪ ಲುಂಬಿ ಮನಂಬಸದೆ ತನುವನಾಱಿಸಲಲರಿಂ| ತುಂಬಿಗಳಿಂ ತಣ್ಣೆಲರಿಂ ತುಂಬಿದ ತಿಳಿಗೊಳದಿನೆಸೆವ … Read more