ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ
ಈ ಕುರಿತಾದ ನನ್ನ ಮೊದಲಿನ ಲೇಖನಕ್ಕೆ ಎಂ ಎಸ್ ಇ ಝಡ್ ತಾ. ೬-೧೦-೦೯ರ ಉದಯವಾಣಿಯಲ್ಲಿ ಪ್ರಕಟಿಸಿದ ಜಾಹೀರಾತನ್ನು ಆಧಾರವಾಗಿ ಇಟ್ಟುಕೊಂಡಿದ್ದೆ. ನನ್ನ ವಿಶ್ಲೇಷಣೆಯ ದೋಷಗಳು ನನಗೆ ತಿಳಿಯುವುದಿಲ್ಲ. ಹಾಗಾಗಿ, ಕಂಪೆನಿ ಯಾವ ಅಧ್ಯಯನವನ್ನು ಆಧರಿಸಿ ಈ ಅಂಕಿ ಅಂಶಗಳನ್ನು, ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿಯುವ ಕುತೂಹಲದಿಂದ, ಮಾಹಿತಿ ಹಕ್ಕನ್ನು ಬಳಸಿ ಎಂ ಎಸ್ ಇ ಝಡ್ ಗೆ ಅರ್ಜಿ ಹಾಕಿ ಈ ಮೂರು ಮಾಹಿತಿಗಳನ್ನು ಕೇಳಿದ್ದೆ:೧. ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ … Read more