ಪಂಪಭಾರತಂ ಆಶ್ವಾಸ ೨ ಪದ್ಯಗಳು ೧ರಿಂದ ೧೭ ಕಂ|| ಶ್ರೀಗಗಲುರಮಂ ಕೀರ್ತಿ | ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ || ಶ್ರೀಗೆ ಭುಜಶಿಖರಮಂ ನೆಲೆ | ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧|| (ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ) ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ, … Read more
Month: October 2018
ಪಂಪಭಾರತ ಆಶ್ವಾಸ ೨ ಪದ್ಯಗಳು: ೧೮ರಿಂದ ೨೯ ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ| ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|| ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ| ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್||೧೮|| (ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್, ತಡಂ ಆಡೆ ಗಾಡಿ, ದಿಟ್ಟಿಗಳೊಳ್ ಅನಂಗರಾಗರಸಂ ಉಣ್ಮುವಿನಂ ನಡೆ ನೋಡಿ ನೋಡಿ, ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ ಆ ವಿಭು ತನ್ನ ಶಾಪಮಂ ಬಗೆಯದೆ, ಮಿೞ್ತುದೇವತೆಯನ್ ಅೞ್ಕಱ್ ಅಳುರ್ಕೆಯಿನ್ … Read more