ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ  ಕುಂಟೆ ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಕೇಸು ಕೋರ್ಟಿಗೆ ಒಯ್ದರು ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ … Read more

ರಾಜರೆಂಬರುಮೊಳರೆ?

(ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ್ಲಿ ಒಂದು. ಸುಕುಮಾರ ಸ್ವಾಮಿ ದೊಡ್ಡ ಶ್ರೀಮಂತ. ಒಂದು ದಿನ ಅವನು ಎಂದಿನಂತೆ ತನ್ನ ಮನೆಯ ಮಹಡಿಯಲ್ಲಿ ವಿಶ್ರಮಿಸಿದ್ದ. ಆಗ ದೂತನೊಬ್ಬ ಬಂದು ಅವನಿಗೆ ಹೇಳಿದ. “ಸ್ವಾಮೀ ನಿಮ್ಮನ್ನು ನೋಡಲು ಮಹಾರಾಜರು ಬಂದಿದ್ದಾರೆ. ಅವರನ್ನು ನೋಡಲು ನೀವು ಕೆಳಗೆ ಬರಬೇಕು” ಸುಕುಮಾರಸ್ವಾಮಿ ಆಶ್ಚರ್ಯದಿಂದ ಕೇಳಿದನಂತೆ: ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?)ಎಂ. ಎಸ್. ಇ. ಜಡ್ … Read more

ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ “ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ” ಎಂಬ ಸುದ್ದಿಗಳು ಪ್ರಕಟವಾದವು. “ವಂಶ” ಪತ್ರಿಕೆಯ ಮಿತ್ರರನ್ನು “ನಮ ಒರ ಪೋದು ತೂದು ಬರ್ಕನ?” (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ. ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.ಹಸಿ ಹಸಿ ಮಣ್ಣಿನ ರಸ್ತೆ. … Read more

ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ?

ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು:“107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. … Read more

3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ” ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ … Read more

ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ

(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ “ನೀರ ನಿಲುತಾಣ”ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು.” ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. “ಅವಧಿ”ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು … Read more

ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ

ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ. ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು.ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ.“ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ” ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ … Read more

ಅಂತೂ ಬಂತು ಅಂತರ್ಜಲ ವಿಧೇಯಕ – ೨೦೧೧

ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, … Read more

ಎಂಡೋಸಲ್ಫಾನ್: ಸದ್ದಿಲ್ಲದೆ ಬಿದ್ದ ಅಣುಬಾಂಬ್

ಸುಮಾರು ಒಂದು ತಿಂಗಳ ಹಿಂದೆ ಡಾ ರವೀಂದ್ರನಾಥ ಶಾನುಭಾಗರಿಂದ ಒಂದು ಮೈಲ್ ಬಂತು: ಅದು ಎಂಡೋ ಸಲ್ಫಾನ್ ಬಹಿಷ್ಕರಿಸುವ ವಿಷಯದಲ್ಲಿ. ನಾನು ಉತ್ತರಿಸಿದೆ: “ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ಅಪಾಯ ಬಂದರೂ ಜನ ಎದ್ದು ಪ್ರತಿಭಟಿಸುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಆದರೂ, ನಾವು ಮಾಡಬೇಕಾದ್ದನ್ನು ಮಾಡಲೇಬೇಕು. ಖಂಡಿತ ಮಾಡೋಣ” ಕಳೆದ ತಿಂಗಳಿನಲ್ಲಿ ಕರ್ನಾಟಕ ಸರಕಾರ ಎಂಡೋಸಲ್ಫಾನನ್ನು ಎರಡು ತಿಂಗಳ ಮಟ್ಟಿಗೆ ನಿಷೇಧಿಸಿತು.. ಹೀಗೆ ಮಾಡಲು ಮೂಲ ಕಾರಣ ಬೆಳ್ತಂಗಡಿಯ ವಿಶ್ವನಾಥ ಗೌಡ ಮತ್ತು ಪುತ್ತೂರಿನ ಸಂಜೀವ ಎಂಬ ಸಾಮಾಜಿಕ … Read more

ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:

ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ,೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು?೨, ಅಭಾವ ಉಂಟಾಗಲು ಕಾರಣಗಳೇನು?೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ?೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು … Read more