ಪಂಪಭಾರತ ಆಶ್ವಾಸ ೩ ಪದ್ಯಗಳು ೫೩ರಿಂದ ೬೪

  ಪಂಪಭಾರತ ಆಶ್ವಾಸ ೩ ಪದ್ಯಗಳು ೫೩ರಿಂದ ೬೪   ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ- ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.   ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ      ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|      ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ      ವ್ವಳಿಸಿರೆ ಮೂಱು ಲೋಕಮನೆ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು (೧-೯)

ಕಂ||     ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳುದಗ್ರ ಭುಜ ವಿಜಯ ಮಹಾ| ಮೇರುವಿನೆ ಕಡೆದು ಪಡೆದಳ ವಾರುಮನಿೞಿಸಿದುದುದಾತ್ತನಾರಾಯಣನಾ ||೧|| (ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ ವಿಜಯ ಮಹಾಮೇರುವಿನೆ ಕಡೆದು ಪಡೆದ ಅಳವು, ಆರುಮನ್‌ ಇೞಿಸಿದುದು ಉದಾತ್ತನಾರಾಯಣನಾ) ಲಕ್ಷ್ಮಿಯನ್ನು ಶತ್ರುಸೈನ್ಯವೆಂಬ ಕಡಲಿನಲ್ಲಿ ತನ್ನ ತೋಳುಗಳೆಂಬ ಮೇರುಪರ್ವತದಿಂದ ಕಡೆದು ಪಡೆದ ಉದಾತ್ತ ನಾರಾಯಣನ (ಅರ್ಜುನನ) ಪರಾಕ್ರಮವು ಯಾರ ಪರಾಕ್ರಮವನ್ನೂ ಕಡಿಮೆ ಮಾಡುವಂತಿತ್ತು. (ಟಿಪ್ಪಣಿ: ಇಲ್ಲಿ ಒಂದನೇ ಆಶ್ವಾಸದ ಮೊದಲನೇ ಪದ್ಯವನ್ನು ನೆನಪಿಸಿಕೊಳ್ಳಬೇಕು. ಅದರಲ್ಲಿ ವಿಷ್ಣುವಿನ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ  … Read more

ಪಂಪಭಾರತ ಆಶ್ವಾಸ ೪ ೪೩-೫೨)

  ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್| ಕೀಲಿಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ ಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್ ಕೀಲಿಸೆ ಕಾವನಂಬು, ಅವಱ ಬಿಣ್ಪಿನೊಳ್‌ ಒಯ್ಯನೆ ಜೋಲ್ದವೋಲೆ ತಾಂಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ (ಸೋಲದೊಳ್‌ ಎಯ್ದೆ … Read more

ಪಂಪಭಾರತ ಆಶ್ವಾಸ ೪ (೮೭-೯೧)

    ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ- ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ ಆ ಪೆಂಡವಾಸಗೇರಿಯೊಳಗೆ ಸೌಭಾಗ್ಯದ, ಭೋಗದ, ಚಾಗದ ರೂಪುಗಳ್ ಮಾನಸರೂಪು ಆದಂತೆ ಎಂಬುದನ್ನು ಕೇಳುತ್ತಾ ಬರುತ್ತಿರಲು, ಆ ಹೆಣ್ಣುಗಳ ಕೇರಿಯಲ್ಲಿ ಶ್ರೀಮಂತಿಕೆ, ಭೋಗ, ದಾನಗಳೇ ಮೈವೆತ್ತಂತಿದ್ದ ಉ|| ಸೀಗುರಿ ಕಾಪಿನಾಳ್ಕುಣಿದು ಮೆಟ್ಟುವ ವೇಸರಿಗೞ್ತೆ ಬೀರಮಂ ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊೞ್ಗಿನಿಂದೆ ಮೆ ಯ್ಯೋಗಮಳುಂಬಮಪ್ಪ ಬಿಯಮಾರೆರ್ದೆಗಂ ಬರೆ ಬರ್ಪ ಪಾಂಗಗು ರ್ವಾಗಿರೆ ಚೆಲ್ವನಾಯ್ತರಬೊಜಂಗರ ಲೀಲೆ ಸುರೇಂದ್ರ … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

    ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ– ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು. ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ| ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ || (ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ; ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ; ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್ ಅವ್ವಳಿಸಿರೆ, ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ)   ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು. ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ– (ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ) ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು– ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ| ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪|| (ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ) ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ  ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು! ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ– (ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ  ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ) ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು– ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ| ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫|| [ʼಅಲರಂಬು (ಇದು) ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತುʼ ಎಂಬಂತೆ, ನೆಯ್ದಿಲ ಕಾವಂ ತಿರುಪುತ್ತುಂ ಒಂದನ್. ಅನಿಬರ್ ತಮ್ಮಂದಿರುಂ ತನ್ನ ಎರೞ್ಕೆಲದೊಳ್ ಬಂದಿರೆ, ನೋಡಿ ಸೋಲ್ತು ನಿನಗೆ, ಆ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ, ನೀನಾತನಂ ನೋಡುಗೇ] (ʼಅಲರಂಬು ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತು ಇದುʼ -ಇಲ್ಲಿ ಅನ್ವಯಾನುಸಾರ ಅರ್ಥ ಮಾಡುವಲ್ಲಿ ಕೊಂಚ ಕ್ಲಿಷ್ಟತೆ ಇದೆ. ಕೊನೆಯ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೯೨ರಿಂದ ೯೮

  ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ ಒಬ್ಬನು (ತನ್ನನ್ನು) ಹೀಯಾಳಿಸಿದ ನಲ್ಲೆಯನ್ನು ಬಿಟ್ಟು ಬರಲಾರದೆ ಅಲ್ಲಿಯೇ ಸುಳಿಯುತ್ತಿರಲು, ಆತನ ಗೆಳೆಯನು ಸಿಟ್ಟುಗೊಂಡು ಹೀಗೆಂದನು: ‌ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ ಪುಸಿದೊಡಮಾಸೆದೋಱೆ ಬಗೆದೋಱದೊಡಂ ನೆರೆದಿರ್ದೊಡಂ ಸಗಾ| ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತಮೀವುದೇ|| ೯೨ || ʼಇಂತು ಇದನ್‌ ಈವೆನ್‌ʼ ಎಂದನಂ ಬಸನದ ಒಡಂಬಡಿಂಗೆ ಅಲಸಿ ಮಾಣ್ದೊಡಂ, ಪುಸಿದೊಡಂ ಆಸೆದೋಱೆ … Read more

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

  ಕಂ|| ಶ್ರೀ ವೀರಶ್ರೀ ಕೀರ್ತಿ ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್| ಭಾವಿಸಿದ ಪೆಂಡಿರೆನಿಸಿದ ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧|| ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ ಪೆಂಡಿರ್‌ ಅಗಲದೆ ತನ್ನೊಳ್ ಭಾವಿಸಿದ ಪೆಂಡಿರ್‌ ಎನಿಸಿದ ಸೌವಾಗ್ಯದ ಹರಿಗನ್‌ ಎಮ್ಮನ್‌ ಏನ್‌ ಒಲ್ದಪನೋ ಸಂಪತ್ತು, ಶೌರ್ಯ, ಕೀರ್ತಿ, ನುಡಿ ಎಂಬ ಮಡದಿಯರನ್ನು ತನ್ನ ಸಹಜವಾದ ಮಡದಿಯರಾಗಿ ಪಡೆದ ಭಾಗ್ಯಶಾಲಿಯಾದ ಅರ್ಜುನನು ನಮ್ಮನ್ನೇನು (ನನ್ನನ್ನೇನು) ಒಲಿಯುತ್ತಾನೆಯೇ? ಕಂ||ಎಂಬ ಬಗೆಯೊಳ್ ಸುಭದ್ರೆ ಪ ಲುಂಬಿ ಮನಂಬಸದೆ ತನುವನಾಱಿಸಲಲರಿಂ| ತುಂಬಿಗಳಿಂ ತಣ್ಣೆಲರಿಂ ತುಂಬಿದ ತಿಳಿಗೊಳದಿನೆಸೆವ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

  ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್- ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು, ಈತನುಂ ಎಮ್ಮಂದಿಗನುಂ ಎಮ್ಮ ನಂಟನುಂ  ಅಕ್ಕುಂ ಎಂದು ಮುಗುಳ್ನಗೆ ನಗುತ್ತುಂ ಬರ್ಪನ್‌ ಒಂದೆಡೆಯೊಳ್ ಎಂದು ತನ್ನೊಳಗೇ ಹಲುಬುತ್ತಿದ್ದವನನ್ನು ಕಂಡು ʼಓಹೋ! ಇವನೂ ನಮ್ಮ ಥರದವನೇ! ನಮ್ಮ ನೆಂಟನೇ ಸೈ!ʼ ಎಂದು ಮುಗುಳ್ನಗೆ ನಗುತ್ತಾ ಬರುತ್ತಿರುವಾಗ ಒಂದು ಕಡೆಯಲ್ಲಿ ಚಂ|| ಒಲವಿನೊಳಾದ ಕಾಯ್ಪು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ ದಲಳೞುತುಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ … Read more

ಪಂಪಭಾರತ ಆಶ್ವಾಸ ೪(೯೯ರಿಂದ೧೦೫)

  ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು- …… ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದ ಆಣ್ಮನಂ ಪಿಡಿದು ….. ಮತ್ತೊಬ್ಬಳು ಬೇಟಕಾತಿಯು, ತಾಯಿಯ ಕಣ್ಣು ತಪ್ಪಿಸಿ ತನ್ನ ಮೋಹದ ಹೆಣ್ಣಿನ ಮನೆಗೆ ಹೋಗುವ ಬೇಟಕಾರನನ್ನು ಅಡ್ಡಗಟ್ಟಿ ಹಿಡಿದು- ಟಿಪ್ಪಣಿ: ಇಲ್ಲಿ ʼತಾಯ ಕಣ್ಣಂ ಬಂಚಿಸಿʼ ಎನ್ನುವಲ್ಲಿ ಈ ʼಬೇಟದಾಣ್ಮʼನ ಎಲ್ಲೆಂದರಲ್ಲಿ ತಿರುಗುವ ಚಾಳಿಯನ್ನು ಕವಿ … Read more