ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ ಒಬ್ಬನು (ತನ್ನನ್ನು) ಹೀಯಾಳಿಸಿದ ನಲ್ಲೆಯನ್ನು ಬಿಟ್ಟು ಬರಲಾರದೆ ಅಲ್ಲಿಯೇ ಸುಳಿಯುತ್ತಿರಲು, ಆತನ ಗೆಳೆಯನು ಸಿಟ್ಟುಗೊಂಡು ಹೀಗೆಂದನು: ‌ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ ಪುಸಿದೊಡಮಾಸೆದೋಱೆ ಬಗೆದೋಱದೊಡಂ ನೆರೆದಿರ್ದೊಡಂ ಸಗಾ| ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತಮೀವುದೇ|| ೯೨ ||   ʼಇಂತು ಇದನ್‌ ಈವೆನ್‌ʼ ಎಂದನಂ ಬಸನದ ಒಡಂಬಡಿಂಗೆ ಅಲಸಿ ಮಾಣ್ದೊಡಂ, ಪುಸಿದೊಡಂ ಆಸೆದೋಱೆ … Read more

ಪಂಪಭಾರತ ಆಶ್ವಾಸ ೪ (೮೭-೯೧)

  ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ- ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ ಆ ಪೆಂಡವಾಸಗೇರಿಯೊಳಗೆ ಸೌಭಾಗ್ಯದ, ಭೋಗದ, ಚಾಗದ ರೂಪುಗಳ್ ಮಾನಸರೂಪು ಆದಂತೆ ಎಂಬುದನ್ನು ಕೇಳುತ್ತಾ ಬರುತ್ತಿರಲು, ಆ ಹೆಣ್ಣುಗಳ ಕೇರಿಯಲ್ಲಿ ಶ್ರೀಮಂತಿಕೆ, ಭೋಗ, ದಾನಗಳೇ ಮೈವೆತ್ತಂತಿದ್ದ ಉ|| ಸೀಗುರಿ ಕಾಪಿನಾಳ್ಕುಣಿದು ಮೆಟ್ಟುವ ವೇಸರಿಗೞ್ತೆ ಬೀರಮಂ ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊೞ್ಗಿನಿಂದೆ ಮೆ ಯ್ಯೋಗಮಳುಂಬಮಪ್ಪ ಬಿಯಮಾರೆರ್ದೆಗಂ ಬರೆ ಬರ್ಪ ಪಾಂಗಗು ರ್ವಾಗಿರೆ ಚೆಲ್ವನಾಯ್ತರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ|| … Read more

ಪಂಪಭಾರತ ಆಶ್ವಾಸ ೪ (೮೦-೮೬)

  ಮ|| ಮೃಗಭೂಋದ್ಧ  ವಿಳಾಸಿನೀ ಕಬರಿಕಾ ಬಂಧಂಗಳಂ ಪೊ[ಕ್ಕು] ಮ ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ| ದುಗಳೊಳ್ ನಾಂದು ಕುರುಳ್ಗಳೊಳ್ ಸುೞಿದು ಮುಂದೊಂದಿರ್ದ ಸೌಭಾಗ್ಯ ಘಂ ಟೆಗಳೊಂದಿಂಚರದೊಳ್ ಪಳಂಚಿ ಸುೞಿದತ್ತಂದೊಂದು ಮಂದಾನಿಳಂ|| ೮೦ || ಮೃಗಭೂ ಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊಕ್ಕು, ಮಲ್ಲಿಗೆಯೊಳ್ ಭಾವಿಸಿ, ಧೂಪದೊಳ್ ಪೊರೆದು, ತತ್ಕಾಂತಾ ರತಿ ಸ್ವೇದ ಬಿಂದುಗಳೊಳ್ ನಾಂದು, ಕುರುಳ್ಗಳೊಳ್ ಸುೞಿದು, ಮುಂದೆ ಒಂದಿರ್ದ ಸೌಭಾಗ್ಯ ಘಂಟೆಗಳ ಒಂದು ಇಂಚರದೊಳ್ ಪಳಂಚಿ ಸುೞಿದತ್ತು ಅಂದು … Read more

ಆಶ್ವಾಸ ೪ ಪದ್ಯಗಳು ೬೫ರಿಂದ ೭೯

  (ಈ ಭಾಗದಲ್ಲಿ ಬರುವ ಅನೇಕ ಪದ್ಯಗಳನ್ನು ಅರ್ಥ ಮಾಡುವುದು ಕಷ್ಟ. ಕೆಲವು ಕಡೆ ವಿರುದ್ಧಾರ್ಥ ಬರುವಂಥ ಮಾತುಗಳೂ ಇವೆ. ಎಲ್‌. ಬಸವರಾಜು ಅವರು ೪ನೇ ಆಶ್ವಾಸದ ೬೩ನೇ ಪದ್ಯದ ನಂತರದ ಭಾಗವನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಇಲ್ಲಿಯೂ ಕೆಲವು ಪದ್ಯಗಳಿಗೂ, ಗದ್ಯಭಾಗಗಳಿಗೂ ಅರ್ಥ ಹೇಳಿಲ್ಲ ಎಂಬುದನ್ನು ವಾಚಕರು/ಕೇಳುಗರು ಗಮನಿಸಬೇಕಾಗಿ ಕೋರಿಕೆ.) ವ|| ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಿಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೫೩ರಿಂದ ೬೪

  ವ|| ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯಾಗ್ರದೊಳೆ ಸಿರಿಯೋಲಗಂಗೊಟ್ಟು  ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು- (ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದ ಎರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯ ಅಗ್ರದೊಳೆ ಸಿರಿ ಓಲಗಂ ಕೊಟ್ಟು  ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು) ಹಾಗೆ ಸೊಗಯಿಸುವ ಅಚ್ಚ ಬೆಳದಿಂಗಳಿನಲ್ಲಿ, ಸುಣ್ಣ ಬಳಿದು ಬಿಳಿಯಾಗಿಸಿದ ಎತ್ತರವಾದ ಉಪ್ಪರಿಗೆಯ ಎರಡನೇ ಹಂತದ ಹಜಾರದ ಎದುರಿನ ಸೊಗಸಾದ ಉಪ್ಪರಿಗೆಯಲ್ಲಿ ವೈಭವದ ಓಲಗ ಕೊಟ್ಟು, ಅರ್ಜುನನೊಂದಿಗೆ ಪಟ್ಟಾಂಗ … Read more

ಪಂಪಭಾರತ ಆಶ್ವಾಸ ೪(೪೩-೫೨)

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್| ಕೀಲಿಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ ಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್ ಕೀಲಿಸೆ ಕಾವನಂಬು, ಅವಱ ಬಿಣ್ಪಿನೊಳ್‌ ಒಯ್ಯನೆ ಜೋಲ್ದವೋಲೆ ತಾಂಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ (ಸೋಲದೊಳ್‌ ಎಯ್ದೆ ಪೀರ್ವ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೩೨ರಿಂದ ೪೨

ಖಪ್ಲು|| ಸಾರ ವಸ್ತುಗಳಿಂ ನೆರೆದಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ| ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨|| ಸಾರ ವಸ್ತುಗಳಿಂ ನೆರೆದ ಅಂಭೋರಾಶಿಯೆ ಕಾದಿಗೆ, ಕಾವನುಂ ಸೀರಪಾಣಿ, ವಿಳಾಸದಿನ್‌ ಆಳ್ದಂ ಚಕ್ರಧರಂ, ಬಗೆವಂಗೆ ಸಂಸಾರಸಾರಂ ಇದು ಎಂಬುದನ್‌ ಎಂದು ಎಯ್ತಂದನ್‌ ಅಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್‌ ದ್ವಾರವತೀಪುರಮಂ ನರಂ ರಸವತ್ತಾದ ವಸ್ತುಗಳಿಂದ ತುಂಬಿದ ಕಡಲೇ ಅಗಳು; ಕಾಯುವವನು ನೇಗಿಲನ್ನು ಹಿಡಿದ ಬಲರಾಮ; ಸೊಗಸಾಗಿ ಆಳುವವನು ಚಕ್ರಪಾಣಿಯಾದ … Read more

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31 ಚಂ||    ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ| ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧|| (ಇದು ಮಳಯಾಚಳಂ, ಮಳಯಜಂ ಮಳಯಾನಿಳನ್‌ ಎಂದು ಪೆಂಪುವೆತ್ತುದು ಸಿರಿಕಂಡಮುಂ, ಪದೆದು ತೀಡುವ ಗಾಳಿಯುಂ; ಇಲ್ಲಿ ಪುಟ್ಟಿ ಪೋಗದು ಪೊಸ ಸುಗ್ಗಿ; ಮೂಗುವಡದು ಇಲ್ಲಿಯ ಕೋಗಿಲೆ; ಬಂದಮಾವು ಬೀಯದು; ಕುಸುಮಾಸ್ತ್ರನ ಆಜ್ಞೆ ತವದು … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೧೧-೨೦

    ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು-   (ಅಂತು ಅಜಾತಶತ್ರು, ಶತ್ರುಪಕ್ಷ ಕ್ಷಯಕರ ಕರವಾಳ ದಂಷ್ಟ್ರಾಭೀಳ ಭುಜಂಗಮೂರ್ತಿ, ವಿಶ್ವ ವಿಶ್ವಂಭರ ಆಧಾರಂ ಅಪ್ಪ ಅರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪ ಅನ್ನೆಗಂ, ವಿಕ್ರಾಂತತುಂಗನ್‌ ಒಂದು ಎಡೆಯೊಳ್‌ ಇರ್ಪ ಇರವಿಂಗೆ ಉಮ್ಮಳಿಸಿ, ದಿಗಂಗನಾ ಮುಖ ಅವಲೋಕನಂಗೆಯ್ಯಲ್ ಬಗೆದು)   ಹಾಗೆ, ಶತ್ರುಗಳೇ ಇಲ್ಲದ ಧರ್ಮರಾಯನು, ಶತ್ರುಗಳ ಪಾಲಿಗೆ, ಸರ್ಪದ ಬಾಯಲ್ಲಿರುವ ಭಯಂಕರ ವಿಷದ ಹಲ್ಲುಗಳಂತಹ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೧ರಿಂದ ೯

ಕಂ||     ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳುದಗ್ರ ಭುಜ ವಿಜಯ ಮಹಾ| ಮೇರುವಿನೆ ಕಡೆದು ಪಡೆದಳ ವಾರುಮನಿೞಿಸಿದುದುದಾತ್ತನಾರಾಯಣನಾ ||೧|| (ಶ್ರೀರಮಣಿಯಂ ದ್ವಿಷದ್ಬಲ ಪಾರಾವಾರದೊಳ್‌ ಉದಗ್ರ ಭುಜ ವಿಜಯ ಮಹಾಮೇರುವಿನೆ ಕಡೆದು ಪಡೆದ ಅಳವು, ಆರುಮನ್‌ ಇೞಿಸಿದುದು ಉದಾತ್ತನಾರಾಯಣನಾ) ಲಕ್ಷ್ಮಿಯನ್ನು ಶತ್ರುಸೈನ್ಯವೆಂಬ ಕಡಲಿನಲ್ಲಿ ತನ್ನ ತೋಳುಗಳೆಂಬ ಮೇರುಪರ್ವತದಿಂದ ಕಡೆದು ಪಡೆದ ಉದಾತ್ತ ನಾರಾಯಣನ (ಅರ್ಜುನನ) ಪರಾಕ್ರಮವು ಯಾರ ಪರಾಕ್ರಮವನ್ನೂ ಕಡಿಮೆ ಮಾಡುವಂತಿತ್ತು. (ಟಿಪ್ಪಣಿ: ಇಲ್ಲಿ ಒಂದನೇ ಆಶ್ವಾಸದ ಮೊದಲನೇ ಪದ್ಯವನ್ನು ನೆನಪಿಸಿಕೊಳ್ಳಬೇಕು. ಅದರಲ್ಲಿ ವಿಷ್ಣುವಿನ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ  … Read more