ಪಂಪಭಾರತ ಆಶ್ವಾಸ ೩ ಪದ್ಯಗಳು ೭೫ರಿಂದ ೮೫

  ವ||ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದಱ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿಹುತ ಹುತವಹಸಮಕ್ಷದೊಳ್ ಕೆಯ್ನೀರೆರೆದು ಪಾಣಿಗ್ರಹಂಗೆಯ್ಸೆ- (ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ, ರಾಜಾವರ್ತದ ಕಂಬದೊಳಂ, ಪವಳದ ಜಂತೆಯೊಳಂ, ಪದ್ಮರಾಗದ ಬೋದಿಗೆಯೊಳಂ, ಇಂದ್ರನೀಲದ ಭದ್ರದೊಳಂ, ಕರ್ಕೇತನದ ಜಾಳರಿಗೆಯೊಳಂ, ಪಳುಕಿನ ಚಿತ್ರಭಿತ್ತಿಯೊಳಂ, … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೬೫ರಿಂದ ೭೪

  ವ|| ಆಗಳ್ ದ್ರುಪದಂ ಬದ್ದವಣದ ಪಱೆಗಳಂ ಬಾಜಿಸಲ್ವೇೞ್ದು ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನೇಱಿಸಿ ಧೃಷ್ಟದ್ಯುಮ್ನ ಯುಧಾಮನ್ಯೂತ್ತಮೌಜಶ್ಶಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊೞಲ್ಗೊಡಗೊಂಡುವರ್ಪುದುಮಿತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳಾಲೋಚಿಸಿ ಪೇೞಿಮೇಗೆಯ್ವಮೆನೆ ಕರ್ಣನಿಂತೆಂದಂ– (ಆಗಳ್ ದ್ರುಪದಂ ಬದ್ದವಣದ ಪಱೆಗಳಂ ಬಾಜಿಸಲ್‌ ಪೇೞ್ದು, ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನ್‌ ಏಱಿಸಿ, ಧೃಷ್ಟದ್ಯುಮ್ನ ಯುಧಾಮನ್ಯು, ಉತ್ತಮೌಜ, ಶಿಖಂಡಿ, ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ, ಮುಂದಿಟ್ಟು ಪೊೞಲ್ಗೆ … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೫೩ರಿಂದ ೬೪

ಪಂಪಭಾರತ ಆಶ್ವಾಸ ೩ ಪದ್ಯಗಳು ೫೩ರಿಂದ ೬೪   ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ- ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.   ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ| ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ || … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨

ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨ ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨ ವ|| ಆಗಿ ಮಱುದಿವಸಂ ನೇಸಱ್ ಮೂಡೆ- ನಂತರ ಮರುದಿನ ನೇಸರು ಮೂಡಲು ಕಂ|| ತಂತಮ್ಮ ರಾಜ್ಯ ಚಿಹ್ನಂ ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ| ತಂತಮ್ಮೆಸೆವ ವಿಳಾಸಂ ತಂತಮ್ಮಿರ್ಪೆಡೆಯೊಳೋಳಿಯಿಂ ಕುಳ್ಳಿರ್ದರ್|| ೪೩|| (ತಂತಮ್ಮ ರಾಜ್ಯ ಚಿಹ್ನಂ, ತಂತಮ್ಮ ಮಹಾ ವಿಭೂತಿ, ತಂತಮ್ಮ ಬಲಂ, ತಂತಮ್ಮ ಎಸೆವ ವಿಳಾಸಂ     ತಂತಮ್ಮ ಇರ್ಪ ಎಡೆಯೊಳ್ ಓಳಿಯಿಂ ಕುಳ್ಳಿರ್ದರ್) ತಾವಿದ್ದ ಜಾಗದಲ್ಲಿ ತಮ್ಮ ರಾಜ್ಯಚಿಹ್ನೆ, … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೩೩ರಿಂದ ೪೨

  ಮ|| ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಮುಗ್ರಾರಿ ವಂ ಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತದ್ದ್ರೌಪದೀ| ಲಲನಾವ್ಯಾಜದಿನೀಗಳೊಂದೆ ಪೊೞಲೊಳ್ ಸಂದಿರ್ದ ಭಾಸ್ವತ್ಸುಹೃ ದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ|| ೩೩|| (ತಲೆಯೊಳ್ ಸೀರೆಯನ್ ಇಕ್ಕಿ ಕೆಮ್ಮನೆ ಎನಿತಂ ಪೂಣ್ದಿರ್ಪಂ? ಉಗ್ರ ಅರಿ ವಂಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತತ್ ದ್ರೌಪದೀಲಲನಾವ್ಯಾಜದಿನ್ ಈಗಳ್ ಒಂದೆ ಪೊೞಲೊಳ್ ಸಂದಿರ್ದ ಭಾಸ್ವತ್ ಸುಹೃತ್ ಬಲಕಂ, ಮಾರ್ವಲಕಂ, ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ’) ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು (ಎಂದರೆ ಗುರುತು ಮರೆಸಿಕೊಂಡು) ಇನ್ನೂ … Read more

ಮೂರನೇ ಆಶ್ವಾಸ ಪದ್ಯಗಳು: ೨೮-೩೨

  ಕಂ|| ದಾಡೆಗಳನರೆಯೊಳಿಂಬಿಂ      ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|      ನೋಡುತ್ತಿರ್ದಾ ಬಕನಂ      ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮|| (ದಾಡೆಗಳನ್ ಅರೆಯೊಳ್ ಇಂಬಿಂ ತೀಡುತ್ತುಂ, ತೀವ್ರಮಾಗೆ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ) ಹರಿತಗೊಳಿಸಲೆಂದು ತನ್ನ ಕೋರೆಹಲ್ಲನ್ನು ಸಾವಕಾಶವಾಗಿ ಬಂಡೆಗೆ ಮಸೆಯುತ್ತಾ, ಅದು ಹರಿತಗೊಂಡಮೇಲೆ, ಬಂಡಿಯು ಬರುವುದನ್ನೇ ಎದುರುನೋಡುತ್ತಿದ್ದ ಬಕನನ್ನು, ಸಾಕಷ್ಟು ದೂರದಿಂದಲೇ ಕಂಡು ಭೀಮನು ಕೆರಳಿದನು. ಕಂ| ಕಡೆಗಣ್ಣೊಳೆ ರಕ್ಕಸನಂ      ನಡೆ ನೋಡಿ … Read more

ಆಶ್ವಾಸ ೩ ಪದ್ಯಗಳು ೨೧-೨೭ ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ      ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|      ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ      ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧|| (ಬರಿಸಿ ಹಿಡಿಂಬೆಯಂ, ಕರೆದು ಸಾರೆ ಘಟೋತ್ಕಚನಂ, ‘ಮನೋಮುದಂ ಬೆರಸು ಒಸೆದು ಇರ್ದೆವು ಇನ್ನೆವರಂ, ಇನ್ನು ಇರಲಾಗದು, ಪೋಪೆವು’ ಎಂದೊಡೆ, ಆದರದೊಳೆ ಕೊಟ್ಟ ವಸ್ತುಗಳನೊಂದುಮನ್ ಒಲ್ಲದೆ, ಕೂರ್ತು ಬುದ್ಧಿ ಪೇೞ್ದು, ಇರಿಸಿ, ಸುಖಪ್ರಯಾಣದೊಳೆ ಪಾಂಡವರ್ ಎಯ್ದಿದರ್ ಏಕಚಕ್ರಮಂ) (ಪಾಂಡವರು) ಹಿಡಿಂಬೆಯನ್ನು ಕರೆಸಿಕೊಂಡು, ಘಟೋತ್ಕಚನನ್ನು … Read more

ಪಂಪಭಾರತ ಆಶ್ವಾಸ ೩ ಪದ್ಯಗಳು ೧೨-೨೦ ಎಂದು ನುಡಿಯುತ್ತಿದ್ದಂತೆ ತಾವರೆಯ ಬಂಧುವು ಉದಯಾಚಲ ಪರ್ವತದ ನೆತ್ತಿಯಲ್ಲಿ ಕಾಣಿಸಿಕೊಂಡನು. ಆಗ, ಆ ಕಾಡನ್ನು ಆಳುವ ಹಿಡಿಂಬನೆಂಬುವನು, ಪಾಂಡವರು ಬಂದಿರುವುದನ್ನು ತಿಳಿದು, ತನ್ನ ತಂಗಿ ಹಿಡಿಂಬೆಯನ್ನು ಕರೆದು- ಕಂ|| ನಿಡಿಯರ್ ಬಲ್ಲಾಯದ ಬ      ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|      ತೊಡರ್ದರ್ ನಮ್ಮಯ ಭಕ್ಷದೊ      ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨|| (ನಿಡಿಯರ್, ಬಲ್ಲಾಯದ ಬಲ್ಡಡಿಗರ್, ವಂದಿರ್ದರ್ ಅಯ್ವರ್ ಆಲದ ಕೆೞಗೆ, ಇಂ ತೊಡರ್ದರ್, ನಮ್ಮಯ ಭಕ್ಷದೊಳ್ … Read more

        ಆಶ್ವಾಸ ೩ ಪದ್ಯಗಳು ೧-೧೧ ಕಂ|| ಶ್ರೀಯನರಾತಿಬಳಾಸೃ      ಕ್ತೋಯಧಿಯೊಳ್ ಪಡೆದ ವೀರನುಱದರಿಗಳನಾ|      ತ್ಮೀಯಪದಸ್ಫುರಿತ ನಖ      ಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ ||೧|| (ಶ್ರೀಯನ್ ಅರಾತಿಬಳಾಸೃಕ್ ತೋಯಧಿಯೊಳ್ ಪಡೆದ ವೀರನ್, ಉಱದ ಅರಿಗಳನ್ ಆತ್ಮೀಯ ಪದಸ್ಫುರಿತ ನಖಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ) ಶತ್ರುಸೈನ್ಯದ ರಕ್ತದ ಕಡಲಿನಲ್ಲಿ ಶ್ರೀಯನ್ನು – ಸಂಪತ್ತನ್ನು – ಪಡೆದವನೂ; ತನ್ನನ್ನು ಒಪ್ಪದ, ತನಗೆ ಬಗ್ಗದ, ತನಗೆ ಸೋಲದ ಶತ್ರುಗಳನ್ನು ತನ್ನ ಕಾಲುಗುರಿನ … Read more

ಪಂಪಭಾರತ ಆಶ್ವಾಸ ೨ ಪದ್ಯಗಳು ೮೭-೯೮

    ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ      ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|      ಡವರನಕಾರಣಂ ಕೆಣಕಿದೀ ಪೊಸ ಪೊೞ್ತಱೊಳಾದ ಕಿರ್ಚು ಕೌ      ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭ || (ಅವರ್, ಇವರ್, ಅನ್ನರ್, ಇನ್ನರ್ ಎನವೇಡ, ಅರಿಕೇಸರಿಗೆ ಆಂಪನ್ ಇಲ್ಲ, ಮೀಱುವ ತಲೆದೋರ್ಪ ಗಂಡರ್ ಅಣಂ ಇಲ್ಲ,  ಎಡೆಯೊಳ್ ಗೆಡೆವಚ್ಚುಗೊಂಡು ಪಾಂಡವರನ್ ಅಕಾರಣಂ ಕೆಣಕಿದ ಈ ಪೊಸ ಪೊೞ್ತಱೊಳ್ ಆದ ಕಿರ್ಚು, ಕೌರವರ್ಗೆ ಇದು ನಾಡೆಯುಂ ತಿಣುಕನ್ ಆಗಿಸದೆ ಏಂ … Read more