ಮಾದರಿ-ಪಾದರಿ-ವಿಷಯ

ನಿರೇನ್, ಅಶೋಕವರ್ಧನರ ಜೊತೆ ಬಿಸಿಲೆಯ ಕಾಡಿನಲ್ಲಿ ನಡೆಯುತ್ತಿದ್ದೆ. ಕಾಡಿನಲ್ಲಿ ನಡೆಯುವಾಗ ಮೌನವಾಗಿರುವುದು ನಿರೇನ್ ಕ್ರಮ. ಅವರು ಸ್ವಲ್ಪ ಮುಂದಿದ್ದರು.”ಅಶೋಕರೆ, ಸ್ಯಾಂಪಲ್ ಪದಕ್ಕೆ ಕನ್ನಡದಲ್ಲಿ ಏನು ಹೇಳಬೇಕು?” ನನ್ನ ಪ್ರಶ್ನೆ.”ಮಾದರಿ”-ಅಶೋಕರ ಉತ್ತರ.ನಾನು – ನೀವೂ ಅದೇ ಹೇಳುತ್ತೀರ? ಗಟ್ಟಿಯವರೂ ಅದೇ ಹೇಳಿದರು. ನನಗೆ ಯಾಕೋ ಆ ಪದ ಸಮಾಧಾನವಿಲ್ಲಅಶೋಕ್-ಪದನಿಧಿ ನೋಡಿ.ಪ್ರಶಾಂತ್ ಮಾಡ್ತರ ಪದನಿಧಿ ಆಗಷ್ಟೆ ಬಿಡುಗಡೆ ಆಗಿತ್ತು. ಅಶೋಕರು (ಎಷ್ಟೆಂದರೂ) ಪುಸ್ತಕ ವ್ಯಾಪಾರಿ.ನಾನು-ಅದರಲ್ಲಿ ಕೊಡುತ್ತಾರೆ ಅನ್ನುತ್ತೀರ?ಅಶೋಕ್ – ಕೊಡಬಹುದು(ಕೆಲವು ಕ್ಷಣ ಮೌನವಾಗಿ ನಡೆದೆವು. ನಂತರ ಮುಂದೆ ನಡೆಯುತ್ತಿದ್ದ ಅಶೋಕ್ … Read more

ಲಂಚದ ಕೋಟೆಗೊಂದು ಸಣ್ಣ ಪೆಟ್ಟು

ದೂರದ ದೆಹಲಿಯಲ್ಲಿರುವ ವೈಲಾಯ ದಂಪತಿಗಳು ನನ್ನ ಪತ್ನಿಯ ಹತ್ತಿರದ ಬಂಧುಗಳು. ಅವರ ಇಬ್ಬರು ಗಂಡು ಮಕ್ಕಳೂ ಅಮೆರಿಕಾದಲ್ಲಿದ್ದಾರೆ. ಹಾಗಾಗಿ ವೈಲಾಯ ದಂಪತಿಗಳು ಮತ್ತೆ ಮತ್ತೆ ಅಮೆರಿಕಕ್ಕೆ ಹೋಗಿ ಬರುತ್ತಿರುತ್ತಾರೆ. ಇತ್ತೀಚಿಗೆ ಮುಂಬಯಿಯಲ್ಲಿ ಉಗ್ರರ ದಾಳಿ ನಡೆದ ನಂತರ ಅಂತರರಾಷ್ಟ್ರೀಯ ಪ್ರಯಾಣಿಕರ ದಾಖಲೆಗಳನ್ನು ತಪಾಸಣಾಧಿಕಾರಿಗಳು ತುಂಬಾ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದಾರಂತೆ. ವೈಲಾಯರ ಪತ್ನಿ ಬಿ.ಸಿ.ರೋಡಿನವರು. ಅವರ ಜನನ ದಾಖಲೆಯನ್ನು ಪಕ್ಕಾ ಮಾಡಿಕೊಳ್ಳುವ ಉದ್ದೇಶದಿಂದ ವೈಲಾಯರು ನಮಗೆ ಒಂದು ಪತ್ರ ಬರೆದು, “ತಾಲೂಕು ಆಫಿಸಿನಿಂದ ಈ ದಾಖಲೆಯನ್ನು ಪಡೆದು ಕಳಿಸಲು ಸಾಧ್ಯವೇ?’ … Read more