Untitled

ಅನುಮತಿ ಇಲ್ಲದ ಕಟ್ಟಡ: ಪುರಸಭೆಯ ಕ್ರಮ ಏನು?

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಮಂಗಳೂರು ಎಸ್. ಇ. ಜಡ್. ಕಂಪೆನಿಯದೆಂದು ಹೇಳಲಾದ ಬೃಹತ್ ಕಟ್ಟಡವನ್ನು ಅನುಮತಿ ಪುರಸಭೆಯ  ಇಲ್ಲದೆಯೇ ನಿರ್ಮಿಸಲಾಗಿದೆಯೆ? ಹೌದೆಂದು ಕೆಲವು ಪುರಸಭಾ ಸದಸ್ಯರು ಅವರಾಗಿಯೇ ನನ್ನ ಹತ್ತಿರ ಹೇಳಿದ್ದಿದೆ.
“ನೀವು ಪುರಸಭಾ ಸದಸ್ಯರು. ನೀವೇ ಏನಾದರೂ ಮಾಡಬೇಕಲ್ಲ?” ಎನ್ನುವ ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಈವರೆಗೂ ಸಿಕ್ಕಿಲ್ಲ. ಸುಮಾರು ಎರಡು ವರ್ಷದಿಂದ ಈ ಬಗ್ಗೆ ಸುಮ್ಮನಿದ್ದ ನನಗೆ ಇತ್ತೀಚೆಗೆ “ನೋಡೋಣ, ಇದೇನು ವಿಷಯ” ಎನಿಸಿದ್ದರಿಂದ ಪುರಸಭೆಗೆ ಮಾಹಿತಿ ಹಕ್ಕಿನಡಿ ಒಂದು ಅರ್ಜಿ ಹಾಕಿದೆ. ಆ ಅರ್ಜಿಯಲ್ಲಿ ಕಟ್ಟಡ ಇರುವ ಸ್ಥಳವನ್ನು ಒಂದು ಅಂದಾಜು ನಕ್ಷೆಯ ಮೂಲಕ ಗುರುತಿಸಿ ತೋರಿಸಿದ್ದೆ. ನಾನು ಕೇಳಿದ ಮಾಹಿತಿ ಹೀಗಿತ್ತು:
1. ನಕ್ಷೆಯಲ್ಲಿ ಸೂಚಿಸಿರುವ, ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟದ್ದೆಂದು ಹೇಳಲಾದ, ಕಟ್ಟಡದ ನಿರ್ಮಾಣಕ್ಕೆ ಪುರಸಭೆಯ ವತಿಯಿಂದ ನೀಡಿರುವ ಅನುಮತಿಯ ದೃಢೀಕೃತ ಪ್ರತಿ.
2. ಈ ಕಟ್ಟಡಕ್ಕೆ ಕದ ಸಂಖ್ಯೆ ನೀಡಿದ್ದಲ್ಲಿ ಆ ದಾಖಲೆಯ ದೃಢೀಕೃತ ಪ್ರತಿ
ಇದಕ್ಕೆ ಪುರಸಭೆ ಕೊಟ್ಟ ಮಾಹಿತಿ ಹೀಗೆ: 
1. ಕಳೆದ 2 ವರ್ಷಗಳಲ್ಲಿ ಕಡತ ಪರಿಶೀಲಿಸಲಾಗಿ ವಿಶೇಷ ಆರ್ಥಿಕ ವಲಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಂಡುಬರುವುದಿಲ್ಲ.
2. ಕಳೆದ 2 ವರ್ಷಗಳಲ್ಲಿ ಕಡತ ಪರಿಶೀಲಿಸಲಾಗಿ ಕದ ಸಂಖ್ಯೆ ನೀಡಿರುವುದು ಕಂಡುಬರುವುದಿಲ್ಲ.
ನನಗೆ ಇನ್ನೂ ನಿಖರವಾದ ಮಾಹಿತಿ ಬೇಕಾಗಿತ್ತು. ಹಾಗಾಗಿ ಗೂಗಲ್  ಅರ್ತಿನಿಂದ ಕಟ್ಟಡದ ನಕ್ಷೆಯ ಪ್ರತಿ ಮಾಡಿ ಪುರಸಭೆಗೆ ಕಳಿಸಿ ಹೀಗೆ ಮಾಹಿತಿ ಕೇಳಿದೆ:

“ಈ ನಕ್ಷೆಯಲ್ಲಿ ನಾನು ಗುರುತು ಮಾಡಿರುವ ಕಟ್ಟಡವು ಯಾರಿಗೆ ಸೇರಿದ್ದು ಮತ್ತು ಈ ಕಟ್ಟಡಕ್ಕೆ ಪುರಸಭೆಯಿಂದ ಪರವಾನಿಗೆ ನೀಡಲಾಗಿದೆಯೆ ಎಂಬ ಮಾಹಿತಿ”
ಪುರಸಭೆ ನೀಡಿದ ಮಾಹಿತಿ ಹೀಗಿತ್ತು:
“ಲಗ್ತೀಕರಿಸಿದ ಗೂಗಲ್ ನಕ್ಷೆಯಲ್ಲಿ ಕಾಣಿಸಲಾದ ಕಟ್ಟಡದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಎಸ್. ಇ. ಝಡ್. ಕಂಪೆನಿ ಹೆಸರಿನಲ್ಲಿ ಕಟ್ಟಡ ನಿರ್ಮಿಸಲು ಪುರಸಭೆಯಿಂದ ಅನುಮತಿ ನೀಡಿರುವುದು ಕಂಡುಬರುವುದಿಲ್ಲ”
ಪುರಸಭೆಯಲ್ಲಿ “ಸಾರ್ವಜನಿಕ ಮಾಹಿತಿ ಅಧಿಕಾರಿ” ಎಂಬ ಪ್ರತ್ಯೇಕ ಅಧಿಕಾರಿ ಇದ್ದಾರೆ. ಮಾಹಿತಿ ಕೋರಿಕೆ ಅರ್ಜಿಗಳು ಇವರ ಹತ್ತಿರ ಹೋಗುತ್ತವೆ ಮತ್ತು ಮಾಹಿತಿಯನ್ನು ಇವರೇ ಕೊಡುತ್ತಾರೆ. ಹಾಗಾಗಿ ನನ್ನ ಪತ್ರದ ವಿಷಯ ಮುಖ್ಯಾಧಿಕಾರಿಯವರ ಗಮನಕ್ಕೆ ಬಂದಿದೆ ಎಂದು ನಾನು ತಿಳಿಯುವಂತಿಲ್ಲ. ಆದರೆ ಬಂದಿಲ್ಲ ಎಂದೂ ಭಾವಿಸುವಂತಿಲ್ಲ. ಏಕೆಂದರೆ ಹಿಂದೊಮ್ಮೆ
 ನಾನು ಪುರಸಭೆಯ ಆಫೀಸಿನ ಒಳ ಹೊಕ್ಕ ಕೆಲವೇ ನಿಮಿಷದಲ್ಲಿ “ಸಂಬಂಧಪಟ್ಟ” ಕೆಲವರು ನನ್ನನ್ನು ಹುಡುಕಿಕೊಂಡು ಬಂದ ಅನುಭವ ನನಗಿದೆ. ಒಂದು ಅರ್ಜಿಯ ವಿಷಯ ಏನು ಅನ್ನುವುದನ್ನು ಅವಲಂಬಿಸಿ, ಅದು ಸಲ್ಲಿಕೆಯಾದ ಕೆಲವೇ ನಿಮಿಷದಲ್ಲಿ ಅದರ ವಿಷಯ ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟುವಂಥ ಜಾಲವನ್ನೇ ನಿರ್ಮಿಸಿಕೊಂಡವರಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ.
ಇರಲಿ. ಪುರಸಭೆಯ ವ್ಯಾಪ್ತಿಯಲ್ಲೇ ಇರುವ ಬೃಹತ್ ಕಟ್ಟಡವೊಂದನ್ನು ಪುರಸಭೆಯ ಅನುಮತಿಯೇ ಇಲ್ಲದೆ ನಿರ್ಮಿಸಲಾಗಿದೆಯೇ, ಹೌದಾದರೆ ಪುರಸಭೆ ಈ ವಿಷಯದಲ್ಲಿ ಕೈಗೊಳ್ಳುವ ಕ್ರಮ ಏನು ಎಂಬ ಕುತೂಹಲ ನನಗಿತ್ತು/ಇದೆ. ಹಾಗಾಗಿ ಪುರಸಭಾ ಮುಖ್ಯಾಧಿಕಾರಿಯವರಿಗೆ, ಪುರಸಭೆಯಿಂದ ಬಂದಿರುವ ಮಾಹಿತಿಗಳನ್ನು ಲಗತ್ತಿಸಿ ಹೀಗೆ ಪತ್ರ ಬರೆದು ಕೇಳಿದ್ದೇನೆ: “ಈ ವಿಷಯದಲ್ಲಿ ಏನಾದರೂ ಕ್ರಮ ಕೈಗೊಳ್ಳಲಾಗುವುದೆ?”. ಏನು ಉತ್ತರ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೇನೆ. ನಿಮಗೂ ಕುತೂಹಲವಿದ್ದರೆ ಸ್ವಲ್ಪ ದಿನ ಕಾಯಿರಿ. ಉತ್ತರ ಬಂದರೆ ತಿಳಿಸುತ್ತೇನೆ.
Facebook Comments Box

Related posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

ಪಂಪಭಾರತ ಆಶ್ವಾಸ ೪ (೮೭-೯೧)

 

ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಎಂಬುದುಂ ಕೇಳುತ್ತುಂ ಬರೆವರೆ...

Latest posts

ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

 

ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು...

ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ...

ಪಂಪಭಾರತ ಆಶ್ವಾಸ ೫ ಪದ್ಯಗಳು ೧ರಿಂದ ೧೦

 

ಕಂ|| ಶ್ರೀ ವೀರಶ್ರೀ ಕೀರ್ತಿ

ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|

ಭಾವಿಸಿದ ಪೆಂಡಿರೆನಿಸಿದ

ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||

ಶ್ರೀ, ವೀರಶ್ರೀ, ಕೀರ್ತಿಶ್ರೀ, ವಾಕ್‌ಶ್ರೀಯೆಂಬ...

ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

 

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು,...

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ

ಎನ್ನುತ್ತಾ ಬರುತ್ತಿದ್ದಾಗ ಒಂದು...

Leave a Comment

Leave a Reply

Your email address will not be published. Required fields are marked *