ಪಂಪಭಾರತ ಆಶ್ವಾಸ ೨ ಪದ್ಯಗಳು ೭೪-೮೬ ಕಂ|| ಆ ದೂರ್ವಾಂಕುರ ವರ್ಣದೊ ಳಾದಮೊಡಂಬಟ್ಟ ಕನಕ ಕವಚಂ ರಾಜ| ತ್ಕೋದಂಡಮಮರ್ದ ದೊಣೆ ಕ ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪ || (ಆ ದೂರ್ವಾಂಕುರ ವರ್ಣದೊಳ್, ಆದಂ ಒಡಂಬಟ್ಟ ಕನಕ ಕವಚಂ, ರಾಜತ್ಕೋದಂಡಂ, ಅಮರ್ದ ದೊಣೆ ಕಣ್ಗೆ ಆದಮೆ ಬರೆ, ಬಂದು ಮುಂದೆ ನಿಂದಂ ಹರಿಗಂ) ದೂರ್ವೆಯ ಕಾಂಡದ ಬಣ್ಣದ ಅರ್ಜುನನು ತನ್ನ ಶರೀರಕ್ಕೊಪ್ಪುವ ಚಿನ್ನದ ಕವಚ, ಹೊಳೆಯುವ ಬಿಲ್ಲು, ಬೆನ್ನಿಗಂಟಿದ … Read more
ಪಂಪಭಾರತ
ಪಂಪಭಾರತ ಆಶ್ವಾಸ ೨ ಪದ್ಯಗಳು ೫೫ರಿಂದ ೭೩
ಪಂಪಭಾರತ ಆಶ್ವಾಸ ೨ ಪದ್ಯಗಳು ೫೫ರಿಂದ ೭೩ ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ– (ಎಂಬುದುಂ ಆ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನ್ ಏಱಿಸಿಕೊಂಡು ಕುಂಭಸಂಭವಂ ಗಾಂಗೇಯನನ್ ಇಂತೆಂದಂ) ಹಾಗೆಂದಾಗ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೆ ಕೂರಿಸಿಕೊಂಡು ದ್ರೋಣನು ಭೀಷ್ಮನ ಹತ್ತಿರ ಹೀಗೆ ಹೇಳಿದನು. ಕಂ|| ಇನಿಬರೊಳಗೀತನೊರ್ವನೆ ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ| ಕಿನಿಸದಿರಿಂ ಮುನ್ನಱಿಪಿದೆ ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ || ೫೫ … Read more
ಪಂಪಭಾರತ ಆಶ್ವಾಸ ೨ ಪದ್ಯಗಳು ೪೧ರಿಂದ ೫೪ ವ|| ಅಂತು ನಕುಲ ಸಹದೇವರ್ ಸಹಿತಮಯ್ವರುಂ ನವಯೌವನದ ಪರಮಸುಖಮನೆಯ್ದಿ ಸಂತೋಷದಿನಿರ್ದರಿತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ– (ಅಂತು ನಕುಲ ಸಹದೇವರ್ ಸಹಿತಂ ಅಯ್ವರುಂ ನವಯೌವನದ ಪರಮಸುಖಮನ್ ಎಯ್ದಿ ಸಂತೋಷದಿನ್ ಇರ್ದರ್. ಇತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-) ಹೀಗೆ ನಕುಲ, ಸಹದೇವರ ಸಹಿತ ಐವರೂ ಹೊಸ ಯೌವನದ ಪರಮ ಸುಖವನ್ನು ಹೊಂದಿ ಸಂತೋಷದಿಂದ ಇದ್ದರು. ಇತ್ತ ಗಂಗಾದ್ವಾರದಲ್ಲಿ ಭರದ್ವಾಜನೆಂಬ ಬ್ರಹ್ಮ ಋಷಿಯು-ಕಂ|| ಸ್ನಾನಾರ್ಥಮೊಂದು ಕಳಶಮ ನಾ ನಿಯಮ ನಿಧಾನನೆೞಲೆ ಪಿಡಿದಮಳಿನ ಗಂ| … Read more
ಪಂಪಭಾರತ ಆಶ್ವಾಸ ೨ ಪದ್ಯಗಳು ೩೦ರಿಂದ ೪೦ ಕಂ|| ಒಡನಾಡಿಯುಮೊಡನೋದಿಯು| ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ|| ಪೊಡೆಸೆಂಡೆಂಬಿವನಾಡು| ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್||೩೦|| (ಒಡನೆ ಆಡಿಯುಂ, ಒಡನೆ ಓದಿಯುಂ, ಒಡನೆ ಬಳೆದುಂ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡುಂ, ಪೊಡೆಸೆಂಡುಂ ಎಂಬಿವನ್ ಆಡುತ್ತ ಒಡನೆ ಬಳೆದರ್ ತಮ್ಮೊಳ್ ಎಳಸೆ ತಂತಂ ಗೆಡೆಗಳ್) ಒಟ್ಟಾಗಿ ಆಡುತ್ತ, ಓದುತ್ತ, ಬೆಳೆಯುತ್ತ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡು, ಪೊಡೆಸೆಂಡು ಎಂಬಂಥ ಮಕ್ಕಳಾಡುವ ಆಟಗಳನ್ನು ಆಡುತ್ತ ಅವರೆಲ್ಲ ತಮ್ಮೊಳಗೆ ಸ್ನೇಹದಿಂದ ಒಟ್ಟಿಗೆ ಬೆಳೆಯುತ್ತಿದ್ದರು.ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು … Read more
ಪಂಪಭಾರತಂ ಆಶ್ವಾಸ ೨ ಪದ್ಯಗಳು ೧ರಿಂದ ೧೭ ಕಂ|| ಶ್ರೀಗಗಲುರಮಂ ಕೀರ್ತಿ | ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ || ಶ್ರೀಗೆ ಭುಜಶಿಖರಮಂ ನೆಲೆ | ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧|| (ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ) ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ, … Read more
ಪಂಪಭಾರತ ಆಶ್ವಾಸ ೨ ಪದ್ಯಗಳು: ೧೮ರಿಂದ ೨೯ ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ| ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|| ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ| ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್||೧೮|| (ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್, ತಡಂ ಆಡೆ ಗಾಡಿ, ದಿಟ್ಟಿಗಳೊಳ್ ಅನಂಗರಾಗರಸಂ ಉಣ್ಮುವಿನಂ ನಡೆ ನೋಡಿ ನೋಡಿ, ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ ಆ ವಿಭು ತನ್ನ ಶಾಪಮಂ ಬಗೆಯದೆ, ಮಿೞ್ತುದೇವತೆಯನ್ ಅೞ್ಕಱ್ ಅಳುರ್ಕೆಯಿನ್ … Read more
ಪಂಪಭಾರತಂ ಆಶ್ವಾಸ ೨ ಪದ್ಯಗಳು ೧ರಿಂದ ೧೭ ಕಂ|| ಶ್ರೀಗಗಲುರಮಂ ಕೀರ್ತಿ | ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ || ಶ್ರೀಗೆ ಭುಜಶಿಖರಮಂ ನೆಲೆ | ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧|| (ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ) ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ, … Read more
ಪಂಪಭಾರತ ಆಶ್ವಾಸ ೧ ಪದ್ಯಗಳು ೧೨೮ರಿಂದ ೧೪೯
ಕಂ|| ಭೀಮಂ ಭಯಂಕರಂ ಪೆಱ | ತೇ ಮಾತೀ ಕೂಸಿನಂದಮೀತನ ಪೆಸರುಂ || ಭೀಮನೆ ಪೋಗೆನೆ ಮುನಿಜನ | ಮೀಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ ||೧೨೮|| (“ಭೀಮಂ ಭಯಂಕರಂ, ಪೆಱತೇ ಮಾತು? ಈ ಕೂಸಿನಂದಂ ಈತನ ಪೆಸರುಂ ಭೀಮನೆ! ಪೋಗು” ಎನೆ ಮುನಿಜನಂ, ಈ ಮಾೞ್ಕೆಯಿನ್ ಆಯ್ತು ಶಿಶುಗೆ ಪೆಸರ್ ಅನ್ವರ್ಥಂ.) ‘ಇವನ ಸ್ವರೂಪವು ಹೆದರಿಕೆ ಹುಟ್ಟಿಸುವಂತಿದೆ! ಬೇರೇನು ಹೇಳುವುದು? ಈತನ ಹೆಸರು ಭೀಮ ಎಂದಾಗಲಿ’ ಎಂದು ಮುನಿಜನರು ಹೇಳಿದರು. ಹೀಗಾಗಿ ಆ … Read more
ಪಂಪಭಾರತ ಆಶ್ವಾಸ ೧ ಪದ್ಯಗಳು ೧೧೫-೧೨೭
ಖಚರ ಪ್ಲುತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ | ಭಂಗಮಂ ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ || ತ್ತುಂಗಮಂ ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂ | ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ ||೧೧೫|| (ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ, ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ, ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಂ, ನೃಪನ್ ಎಯ್ದಿದನ್ ಉದ್ಯಚ್ಛೃಂಗಮನ್ ಆ ಶತಶೃಂಗಮಂ.) … Read more
ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪
ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪ ಕಂ|| ಕೂರಿ[ಸೆ] ಗುರುಶುಶ್ರೂಷೆಯೊ | ಳಾ ರಾಮನನುಗ್ರ ಪರಶುಪಾಟಿತ ರಿಪು ವಂ || ಶಾರಾಮನನಿಷು ವಿದ್ಯಾ | ಪಾರಗನೆನಿಸಿದುದು ಬಲ್ಮೆ ವೈಕರ್ತನನಾ ||೧೦೪|| ತನ್ನ ಉಗ್ರವಾದ ಕೊಡಲಿಯಿಂದ ವೈರಿಗಳ ವಂಶವನ್ನೇ ನಾಶ ಮಾಡಿದ ಪರಶುರಾಮನಿಗೆ ಪ್ರೀತಿ ಹುಟ್ಟುವಂತೆ ಕರ್ಣನು ಆತನ ಸೇವೆ ಮಾಡಿ ಬಿಲ್ವಿದ್ಯೆಯಲ್ಲಿ ಪಾರಂಗತನಾದನು. (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನನ್, ಉಗ್ರ ಪರಶುಪಾಟಿತ ರಿಪು ವಂಶಾರಾಮನನ್, ಇಷು ವಿದ್ಯಾ ಪಾರಗನ್ ಎನಿಸಿದುದು ಬಲ್ಮೆ … Read more