ಪಂಪಭಾರತ ಆಶ್ವಾಸ ೪ ಪದ್ಯಗಳು ೧೦೮ರಿಂದ ೧೧೧

  ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್- ಎಂದು ತನ್ನೊಳ್ ಪಲುಂಬುತಿರ್ದನಂ ಕಂಡು, ಈತನುಂ ಎಮ್ಮಂದಿಗನುಂ ಎಮ್ಮ ನಂಟನುಂ  ಅಕ್ಕುಂ ಎಂದು ಮುಗುಳ್ನಗೆ ನಗುತ್ತುಂ ಬರ್ಪನ್‌ ಒಂದೆಡೆಯೊಳ್ ಎಂದು ತನ್ನೊಳಗೇ ಹಲುಬುತ್ತಿದ್ದವನನ್ನು ಕಂಡು ʼಓಹೋ! ಇವನೂ ನಮ್ಮ ಥರದವನೇ! ನಮ್ಮ ನೆಂಟನೇ ಸೈ!ʼ ಎಂದು ಮುಗುಳ್ನಗೆ ನಗುತ್ತಾ ಬರುತ್ತಿರುವಾಗ ಒಂದು ಕಡೆಯಲ್ಲಿ ಚಂ|| ಒಲವಿನೊಳಾದ ಕಾಯ್ಪು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ ದಲಳೞುತುಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ … Read more

ಪಂಪಭಾರತ ಆಶ್ವಾಸ ೪(೯೯ರಿಂದ೧೦೫)

  ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು- …… ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದ ಆಣ್ಮನಂ ಪಿಡಿದು ….. ಮತ್ತೊಬ್ಬಳು ಬೇಟಕಾತಿಯು, ತಾಯಿಯ ಕಣ್ಣು ತಪ್ಪಿಸಿ ತನ್ನ ಮೋಹದ ಹೆಣ್ಣಿನ ಮನೆಗೆ ಹೋಗುವ ಬೇಟಕಾರನನ್ನು ಅಡ್ಡಗಟ್ಟಿ ಹಿಡಿದು- ಟಿಪ್ಪಣಿ: ಇಲ್ಲಿ ʼತಾಯ ಕಣ್ಣಂ ಬಂಚಿಸಿʼ ಎನ್ನುವಲ್ಲಿ ಈ ʼಬೇಟದಾಣ್ಮʼನ ಎಲ್ಲೆಂದರಲ್ಲಿ ತಿರುಗುವ ಚಾಳಿಯನ್ನು ಕವಿ … Read more

ಆಶ್ವಾಸ ೪ ಪದ್ಯಗಳು ೯೨-೯೮

ಎನುತುಂ ಬರ್ಪನ್‌ ಒಂದೆಡೆಯೊಳ್‌ ಒರ್ವಂ ಪೞಿಕೆಯ್ದ ನಲ್ಲಳನ್‌ ಉೞಿಯಲಾಱದೆ ಸುೞಿಯೆ ಮುಳಿದು ಆತನ ಕೆಳೆಯನಿಂತೆಂದಂ ಎನ್ನುತ್ತಾ ಬರುತ್ತಿದ್ದಾಗ ಒಂದು ಕಡೆಯಲ್ಲಿ ಒಬ್ಬನು (ತನ್ನನ್ನು) ಹೀಯಾಳಿಸಿದ ನಲ್ಲೆಯನ್ನು ಬಿಟ್ಟು ಬರಲಾರದೆ ಅಲ್ಲಿಯೇ ಸುಳಿಯುತ್ತಿರಲು, ಆತನ ಗೆಳೆಯನು ಸಿಟ್ಟುಗೊಂಡು ಹೀಗೆಂದನು: ‌ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ ಪುಸಿದೊಡಮಾಸೆದೋಱೆ ಬಗೆದೋಱದೊಡಂ ನೆರೆದಿರ್ದೊಡಂ ಸಗಾ| ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತಮೀವುದೇ|| ೯೨ ||   ʼಇಂತು ಇದನ್‌ ಈವೆನ್‌ʼ ಎಂದನಂ ಬಸನದ ಒಡಂಬಡಿಂಗೆ ಅಲಸಿ ಮಾಣ್ದೊಡಂ, ಪುಸಿದೊಡಂ ಆಸೆದೋಱೆ … Read more

ಪಂಪಭಾರತ ಆಶ್ವಾಸ ೪ (೮೭-೯೧)

  ವ|| ಎಂಬುದುಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ- ಎಂಬುದುಂ ಕೇಳುತ್ತುಂ ಬರೆವರೆ ಮತ್ತಂ ಆ ಪೆಂಡವಾಸಗೇರಿಯೊಳಗೆ ಸೌಭಾಗ್ಯದ, ಭೋಗದ, ಚಾಗದ ರೂಪುಗಳ್ ಮಾನಸರೂಪು ಆದಂತೆ ಎಂಬುದನ್ನು ಕೇಳುತ್ತಾ ಬರುತ್ತಿರಲು, ಆ ಹೆಣ್ಣುಗಳ ಕೇರಿಯಲ್ಲಿ ಶ್ರೀಮಂತಿಕೆ, ಭೋಗ, ದಾನಗಳೇ ಮೈವೆತ್ತಂತಿದ್ದ ಉ|| ಸೀಗುರಿ ಕಾಪಿನಾಳ್ಕುಣಿದು ಮೆಟ್ಟುವ ವೇಸರಿಗೞ್ತೆ ಬೀರಮಂ ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊೞ್ಗಿನಿಂದೆ ಮೆ ಯ್ಯೋಗಮಳುಂಬಮಪ್ಪ ಬಿಯಮಾರೆರ್ದೆಗಂ ಬರೆ ಬರ್ಪ ಪಾಂಗಗು ರ್ವಾಗಿರೆ ಚೆಲ್ವನಾಯ್ತರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ|| … Read more

ಪಂಪಭಾರತ ಆಶ್ವಾಸ ೪ (೮೦-೮೬)

  ಮ|| ಮೃಗಭೂಋದ್ಧ  ವಿಳಾಸಿನೀ ಕಬರಿಕಾ ಬಂಧಂಗಳಂ ಪೊ[ಕ್ಕು] ಮ ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ| ದುಗಳೊಳ್ ನಾಂದು ಕುರುಳ್ಗಳೊಳ್ ಸುೞಿದು ಮುಂದೊಂದಿರ್ದ ಸೌಭಾಗ್ಯ ಘಂ ಟೆಗಳೊಂದಿಂಚರದೊಳ್ ಪಳಂಚಿ ಸುೞಿದತ್ತಂದೊಂದು ಮಂದಾನಿಳಂ|| ೮೦ || ಮೃಗಭೂ ಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊಕ್ಕು, ಮಲ್ಲಿಗೆಯೊಳ್ ಭಾವಿಸಿ, ಧೂಪದೊಳ್ ಪೊರೆದು, ತತ್ಕಾಂತಾ ರತಿ ಸ್ವೇದ ಬಿಂದುಗಳೊಳ್ ನಾಂದು, ಕುರುಳ್ಗಳೊಳ್ ಸುೞಿದು, ಮುಂದೆ ಒಂದಿರ್ದ ಸೌಭಾಗ್ಯ ಘಂಟೆಗಳ ಒಂದು ಇಂಚರದೊಳ್ ಪಳಂಚಿ ಸುೞಿದತ್ತು ಅಂದು … Read more

ಆಶ್ವಾಸ ೪ ಪದ್ಯಗಳು ೬೫ರಿಂದ ೭೯

  (ಈ ಭಾಗದಲ್ಲಿ ಬರುವ ಅನೇಕ ಪದ್ಯಗಳನ್ನು ಅರ್ಥ ಮಾಡುವುದು ಕಷ್ಟ. ಕೆಲವು ಕಡೆ ವಿರುದ್ಧಾರ್ಥ ಬರುವಂಥ ಮಾತುಗಳೂ ಇವೆ. ಎಲ್‌. ಬಸವರಾಜು ಅವರು ೪ನೇ ಆಶ್ವಾಸದ ೬೩ನೇ ಪದ್ಯದ ನಂತರದ ಭಾಗವನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಇಲ್ಲಿಯೂ ಕೆಲವು ಪದ್ಯಗಳಿಗೂ, ಗದ್ಯಭಾಗಗಳಿಗೂ ಅರ್ಥ ಹೇಳಿಲ್ಲ ಎಂಬುದನ್ನು ವಾಚಕರು/ಕೇಳುಗರು ಗಮನಿಸಬೇಕಾಗಿ ಕೋರಿಕೆ.) ವ|| ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಿಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೫೩ರಿಂದ ೬೪

  ವ|| ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯಾಗ್ರದೊಳೆ ಸಿರಿಯೋಲಗಂಗೊಟ್ಟು  ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು- (ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದ ಎರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಯ ಹರ್ಮ್ಯ ಅಗ್ರದೊಳೆ ಸಿರಿ ಓಲಗಂ ಕೊಟ್ಟು  ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು) ಹಾಗೆ ಸೊಗಯಿಸುವ ಅಚ್ಚ ಬೆಳದಿಂಗಳಿನಲ್ಲಿ, ಸುಣ್ಣ ಬಳಿದು ಬಿಳಿಯಾಗಿಸಿದ ಎತ್ತರವಾದ ಉಪ್ಪರಿಗೆಯ ಎರಡನೇ ಹಂತದ ಹಜಾರದ ಎದುರಿನ ಸೊಗಸಾದ ಉಪ್ಪರಿಗೆಯಲ್ಲಿ ವೈಭವದ ಓಲಗ ಕೊಟ್ಟು, ಅರ್ಜುನನೊಂದಿಗೆ ಪಟ್ಟಾಂಗ … Read more

ಪಂಪಭಾರತ ಆಶ್ವಾಸ ೪(೪೩-೫೨)

ಉ|| ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್| ಕೀಲಿಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ ಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ ಸೋಲದೊಳ್‌ ಎಯ್ದೆ ಪೀರ್ವ ತೆಱದಿನ್ ಎಮೆಯಿಕ್ಕದೆ ನೋೞ್ಪ ಕಣ್ಗೆ ಕಣ್‌ ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್ ಕೀಲಿಸೆ ಕಾವನಂಬು, ಅವಱ ಬಿಣ್ಪಿನೊಳ್‌ ಒಯ್ಯನೆ ಜೋಲ್ದವೋಲೆ ತಾಂಬೂಲ ಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ (ಸೋಲದೊಳ್‌ ಎಯ್ದೆ ಪೀರ್ವ … Read more

ಪಂಪಭಾರತ ಆಶ್ವಾಸ ೪ ಪದ್ಯಗಳು ೩೨ರಿಂದ ೪೨

ಖಪ್ಲು|| ಸಾರ ವಸ್ತುಗಳಿಂ ನೆರೆದಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ| ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨|| ಸಾರ ವಸ್ತುಗಳಿಂ ನೆರೆದ ಅಂಭೋರಾಶಿಯೆ ಕಾದಿಗೆ, ಕಾವನುಂ ಸೀರಪಾಣಿ, ವಿಳಾಸದಿನ್‌ ಆಳ್ದಂ ಚಕ್ರಧರಂ, ಬಗೆವಂಗೆ ಸಂಸಾರಸಾರಂ ಇದು ಎಂಬುದನ್‌ ಎಂದು ಎಯ್ತಂದನ್‌ ಅಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್‌ ದ್ವಾರವತೀಪುರಮಂ ನರಂ ರಸವತ್ತಾದ ವಸ್ತುಗಳಿಂದ ತುಂಬಿದ ಕಡಲೇ ಅಗಳು; ಕಾಯುವವನು ನೇಗಿಲನ್ನು ಹಿಡಿದ ಬಲರಾಮ; ಸೊಗಸಾಗಿ ಆಳುವವನು ಚಕ್ರಪಾಣಿಯಾದ … Read more

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31

ಪಂಪಭಾರತ ಆಶ್ವಾಸ 4 ಪದ್ಯಗಳು 21ರಿಂದ 31 ಚಂ||    ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ| ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧|| (ಇದು ಮಳಯಾಚಳಂ, ಮಳಯಜಂ ಮಳಯಾನಿಳನ್‌ ಎಂದು ಪೆಂಪುವೆತ್ತುದು ಸಿರಿಕಂಡಮುಂ, ಪದೆದು ತೀಡುವ ಗಾಳಿಯುಂ; ಇಲ್ಲಿ ಪುಟ್ಟಿ ಪೋಗದು ಪೊಸ ಸುಗ್ಗಿ; ಮೂಗುವಡದು ಇಲ್ಲಿಯ ಕೋಗಿಲೆ; ಬಂದಮಾವು ಬೀಯದು; ಕುಸುಮಾಸ್ತ್ರನ ಆಜ್ಞೆ ತವದು … Read more