ಮೂರನೇ ಆಶ್ವಾಸ ಪದ್ಯಗಳು: ೨೮-೩೨

  ಕಂ|| ದಾಡೆಗಳನರೆಯೊಳಿಂಬಿಂ      ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|      ನೋಡುತ್ತಿರ್ದಾ ಬಕನಂ      ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮|| (ದಾಡೆಗಳನ್ ಅರೆಯೊಳ್ ಇಂಬಿಂ ತೀಡುತ್ತುಂ, ತೀವ್ರಮಾಗೆ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ) ಹರಿತಗೊಳಿಸಲೆಂದು ತನ್ನ ಕೋರೆಹಲ್ಲನ್ನು ಸಾವಕಾಶವಾಗಿ ಬಂಡೆಗೆ ಮಸೆಯುತ್ತಾ, ಅದು ಹರಿತಗೊಂಡಮೇಲೆ, ಬಂಡಿಯು ಬರುವುದನ್ನೇ ಎದುರುನೋಡುತ್ತಿದ್ದ ಬಕನನ್ನು, ಸಾಕಷ್ಟು ದೂರದಿಂದಲೇ ಕಂಡು ಭೀಮನು ಕೆರಳಿದನು. ಕಂ| ಕಡೆಗಣ್ಣೊಳೆ ರಕ್ಕಸನಂ      ನಡೆ ನೋಡಿ

Read more

Untitled

ಆಶ್ವಾಸ ೩ ಪದ್ಯಗಳು ೨೧-೨೭ ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ      ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|      ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ      ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧|| (ಬರಿಸಿ ಹಿಡಿಂಬೆಯಂ, ಕರೆದು ಸಾರೆ ಘಟೋತ್ಕಚನಂ, ‘ಮನೋಮುದಂ ಬೆರಸು ಒಸೆದು ಇರ್ದೆವು ಇನ್ನೆವರಂ, ಇನ್ನು ಇರಲಾಗದು, ಪೋಪೆವು’ ಎಂದೊಡೆ, ಆದರದೊಳೆ ಕೊಟ್ಟ ವಸ್ತುಗಳನೊಂದುಮನ್ ಒಲ್ಲದೆ, ಕೂರ್ತು ಬುದ್ಧಿ ಪೇೞ್ದು, ಇರಿಸಿ, ಸುಖಪ್ರಯಾಣದೊಳೆ ಪಾಂಡವರ್ ಎಯ್ದಿದರ್ ಏಕಚಕ್ರಮಂ) (ಪಾಂಡವರು) ಹಿಡಿಂಬೆಯನ್ನು ಕರೆಸಿಕೊಂಡು, ಘಟೋತ್ಕಚನನ್ನು

Read more

Untitled

ಪಂಪಭಾರತ ಆಶ್ವಾಸ ೩ ಪದ್ಯಗಳು ೧೨-೨೦ ಎಂದು ನುಡಿಯುತ್ತಿದ್ದಂತೆ ತಾವರೆಯ ಬಂಧುವು ಉದಯಾಚಲ ಪರ್ವತದ ನೆತ್ತಿಯಲ್ಲಿ ಕಾಣಿಸಿಕೊಂಡನು. ಆಗ, ಆ ಕಾಡನ್ನು ಆಳುವ ಹಿಡಿಂಬನೆಂಬುವನು, ಪಾಂಡವರು ಬಂದಿರುವುದನ್ನು ತಿಳಿದು, ತನ್ನ ತಂಗಿ ಹಿಡಿಂಬೆಯನ್ನು ಕರೆದು- ಕಂ|| ನಿಡಿಯರ್ ಬಲ್ಲಾಯದ ಬ      ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|      ತೊಡರ್ದರ್ ನಮ್ಮಯ ಭಕ್ಷದೊ      ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨|| (ನಿಡಿಯರ್, ಬಲ್ಲಾಯದ ಬಲ್ಡಡಿಗರ್, ವಂದಿರ್ದರ್ ಅಯ್ವರ್ ಆಲದ ಕೆೞಗೆ, ಇಂ ತೊಡರ್ದರ್, ನಮ್ಮಯ ಭಕ್ಷದೊಳ್

Read more

Untitled

        ಆಶ್ವಾಸ ೩ ಪದ್ಯಗಳು ೧-೧೧ ಕಂ|| ಶ್ರೀಯನರಾತಿಬಳಾಸೃ      ಕ್ತೋಯಧಿಯೊಳ್ ಪಡೆದ ವೀರನುಱದರಿಗಳನಾ|      ತ್ಮೀಯಪದಸ್ಫುರಿತ ನಖ      ಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ ||೧|| (ಶ್ರೀಯನ್ ಅರಾತಿಬಳಾಸೃಕ್ ತೋಯಧಿಯೊಳ್ ಪಡೆದ ವೀರನ್, ಉಱದ ಅರಿಗಳನ್ ಆತ್ಮೀಯ ಪದಸ್ಫುರಿತ ನಖಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ) ಶತ್ರುಸೈನ್ಯದ ರಕ್ತದ ಕಡಲಿನಲ್ಲಿ ಶ್ರೀಯನ್ನು – ಸಂಪತ್ತನ್ನು – ಪಡೆದವನೂ; ತನ್ನನ್ನು ಒಪ್ಪದ, ತನಗೆ ಬಗ್ಗದ, ತನಗೆ ಸೋಲದ ಶತ್ರುಗಳನ್ನು ತನ್ನ ಕಾಲುಗುರಿನ

Read more

ಪಂಪಭಾರತ ಆಶ್ವಾಸ ೨ ಪದ್ಯಗಳು ೮೭-೯೮

    ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ      ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|      ಡವರನಕಾರಣಂ ಕೆಣಕಿದೀ ಪೊಸ ಪೊೞ್ತಱೊಳಾದ ಕಿರ್ಚು ಕೌ      ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭ || (ಅವರ್, ಇವರ್, ಅನ್ನರ್, ಇನ್ನರ್ ಎನವೇಡ, ಅರಿಕೇಸರಿಗೆ ಆಂಪನ್ ಇಲ್ಲ, ಮೀಱುವ ತಲೆದೋರ್ಪ ಗಂಡರ್ ಅಣಂ ಇಲ್ಲ,  ಎಡೆಯೊಳ್ ಗೆಡೆವಚ್ಚುಗೊಂಡು ಪಾಂಡವರನ್ ಅಕಾರಣಂ ಕೆಣಕಿದ ಈ ಪೊಸ ಪೊೞ್ತಱೊಳ್ ಆದ ಕಿರ್ಚು, ಕೌರವರ್ಗೆ ಇದು ನಾಡೆಯುಂ ತಿಣುಕನ್ ಆಗಿಸದೆ ಏಂ

Read more

Untitled

ಪಂಪಭಾರತ ಆಶ್ವಾಸ ೨ ಪದ್ಯಗಳು ೭೪-೮೬ ಕಂ|| ಆ ದೂರ್ವಾಂಕುರ ವರ್ಣದೊ      ಳಾದಮೊಡಂಬಟ್ಟ ಕನಕ ಕವಚಂ ರಾಜ|      ತ್ಕೋದಂಡಮಮರ್ದ ದೊಣೆ ಕ      ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪ ||  (ಆ ದೂರ್ವಾಂಕುರ ವರ್ಣದೊಳ್, ಆದಂ ಒಡಂಬಟ್ಟ ಕನಕ ಕವಚಂ, ರಾಜತ್ಕೋದಂಡಂ, ಅಮರ್ದ ದೊಣೆ ಕಣ್ಗೆ ಆದಮೆ ಬರೆ, ಬಂದು ಮುಂದೆ ನಿಂದಂ ಹರಿಗಂ) ದೂರ್ವೆಯ ಕಾಂಡದ ಬಣ್ಣದ ಅರ್ಜುನನು ತನ್ನ ಶರೀರಕ್ಕೊಪ್ಪುವ ಚಿನ್ನದ ಕವಚ, ಹೊಳೆಯುವ ಬಿಲ್ಲು, ಬೆನ್ನಿಗಂಟಿದ

Read more

Untitled

ಪಂಪಭಾರತ ಆಶ್ವಾಸ ೨ ಪದ್ಯಗಳು ೫೫ರಿಂದ ೭೩ ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ– (ಎಂಬುದುಂ ಆ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನ್ ಏಱಿಸಿಕೊಂಡು ಕುಂಭಸಂಭವಂ ಗಾಂಗೇಯನನ್ ಇಂತೆಂದಂ)  ಹಾಗೆಂದಾಗ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೆ ಕೂರಿಸಿಕೊಂಡು ದ್ರೋಣನು ಭೀಷ್ಮನ ಹತ್ತಿರ ಹೀಗೆ ಹೇಳಿದನು. ಕಂ|| ಇನಿಬರೊಳಗೀತನೊರ್ವನೆ     ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ|     ಕಿನಿಸದಿರಿಂ ಮುನ್ನಱಿಪಿದೆ     ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ || ೫೫ ||  (‘ಇನಿಬರೊಳಗೆ ಈತನೊರ್ವನೆ ಧನುರಾಗಮದ

Read more

Untitled

ಪಂಪಭಾರತ ಆಶ್ವಾಸ ೨ ಪದ್ಯಗಳು ೪೧ರಿಂದ ೫೪ ವ|| ಅಂತು ನಕುಲ ಸಹದೇವರ್ ಸಹಿತಮಯ್ವರುಂ ನವಯೌವನದ ಪರಮಸುಖಮನೆಯ್ದಿ ಸಂತೋಷದಿನಿರ್ದರಿತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ–  (ಅಂತು ನಕುಲ ಸಹದೇವರ್ ಸಹಿತಂ ಅಯ್ವರುಂ ನವಯೌವನದ ಪರಮಸುಖಮನ್ ಎಯ್ದಿ ಸಂತೋಷದಿನ್ ಇರ್ದರ್. ಇತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-) ಹೀಗೆ ನಕುಲ, ಸಹದೇವರ ಸಹಿತ ಐವರೂ ಹೊಸ ಯೌವನದ ಪರಮ ಸುಖವನ್ನು ಹೊಂದಿ ಸಂತೋಷದಿಂದ ಇದ್ದರು. ಇತ್ತ ಗಂಗಾದ್ವಾರದಲ್ಲಿ ಭರದ್ವಾಜನೆಂಬ ಬ್ರಹ್ಮ ಋಷಿಯು-ಕಂ|| ಸ್ನಾನಾರ್ಥಮೊಂದು ಕಳಶಮ     ನಾ ನಿಯಮ ನಿಧಾನನೆೞಲೆ ಪಿಡಿದಮಳಿನ ಗಂ|

Read more

Untitled

ಪಂಪಭಾರತ ಆಶ್ವಾಸ ೨ ಪದ್ಯಗಳು ೩೦ರಿಂದ ೪೦ ಕಂ|| ಒಡನಾಡಿಯುಮೊಡನೋದಿಯು|     ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ||     ಪೊಡೆಸೆಂಡೆಂಬಿವನಾಡು|     ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್||೩೦||  (ಒಡನೆ ಆಡಿಯುಂ, ಒಡನೆ ಓದಿಯುಂ, ಒಡನೆ ಬಳೆದುಂ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡುಂ, ಪೊಡೆಸೆಂಡುಂ ಎಂಬಿವನ್ ಆಡುತ್ತ ಒಡನೆ ಬಳೆದರ್ ತಮ್ಮೊಳ್ ಎಳಸೆ ತಂತಂ ಗೆಡೆಗಳ್) ಒಟ್ಟಾಗಿ ಆಡುತ್ತ, ಓದುತ್ತ, ಬೆಳೆಯುತ್ತ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡು, ಪೊಡೆಸೆಂಡು ಎಂಬಂಥ ಮಕ್ಕಳಾಡುವ ಆಟಗಳನ್ನು ಆಡುತ್ತ ಅವರೆಲ್ಲ ತಮ್ಮೊಳಗೆ ಸ್ನೇಹದಿಂದ ಒಟ್ಟಿಗೆ ಬೆಳೆಯುತ್ತಿದ್ದರು.ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು

Read more

Untitled

ಪಂಪಭಾರತಂ ಆಶ್ವಾಸ ೨ ಪದ್ಯಗಳು ೧ರಿಂದ ೧೭ ಕಂ|| ಶ್ರೀಗಗಲುರಮಂ ಕೀರ್ತಿ |      ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ ||      ಶ್ರೀಗೆ ಭುಜಶಿಖರಮಂ ನೆಲೆ |     ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧|| (ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ) ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ,

Read more