ಬಿ.ಸಿ.ರೋಡಿಗೊಂದು ಸಭಾಭವನ: ಇದ್ದಿದ್ದೂ ಹೋಯ್ತು ಮದ್ದಿನ ಗುಣದಿಂದ! ಅಡುಗೆ ಅನಿಲದ ಸಭೆಯ ಕುರಿತಾಗಿ ಬರೆಯುವಾಗ ನಮ್ಮೂರಿಗೊಂದು ಸಭಾಭವನ ಇಲ್ಲದಿರುವುದನ್ನೂ ಪ್ರಸ್ತಾವಿಸಿದ್ದೆ. ಈಗ ಇದ್ದಿದ್ದನ್ನೂ ಕಳಕೊಂಡು ಪೆದ್ದಂಬಟ್ಟಗಳಾದ ನಮ್ಮ ಕತೆಯನ್ನು ವ್ಯಥೆಯಿಂದಲೇ ಹೇಳಬೇಕಾಗಿದೆ. ಹಿಂದಿನ ಒಂದು ಪ್ರಸಂಗ ಚತುಷ್ಪಥ ರಸ್ತೆ ಆಗುವ ಮೊದಲು ಬಿ.ಸಿ.ರೋಡು ಕೈಕಂಬದಲ್ಲಿ ಮಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಒಂದು ಬಸ್ ತಂಗುದಾಣವಿತ್ತು. ರಸ್ತೆಯ ಕೆಲಸ ಪ್ರಾರಂಭವಾಗುವ ಎರಡು ವರ್ಷಗಳ ಮೊದಲೇ ಈ ಬಸ್ ತಂಗುದಾಣವನ್ನು ಅವಸರವಸರವಾಗಿ ಕೆಡವಿ ಹಾಕಿದರು. ರಸ್ತೆಯ ಕೆಲಸ ಮುಗಿದು ನಾಲ್ಕೈದು ವರ್ಷಗಳೇ … Read more
Uncategorized
ನಮ್ಮೂರಿನಲ್ಲೊಂದು ಅಡುಗೆ ಅನಿಲ ಬಳಕೆದಾರರ ಸಭೆ ನಿನ್ನೆ ೧೨/೩/೧೫ರಂದು ನಮ್ಮ ಬಂಟ್ವಾಳದಲ್ಲಿ ಅಡುಗೆ ಅನಿಲದ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಭೆ ನಡೆಯಿತು. ಒಂದು ತಿಂಗಳ ಹಿಂದೆ ಇಂಥದೇ ಒಂದು ಸಭೆ ನಡೆದಿತ್ತು. ಇನ್ನು ಮೇಲೆ ಮೂರು ತಿಂಗಳಿಗೊಮ್ಮೆ ನಡೆಯುತ್ತದೆಯಂತೆ. ಇದು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಎಂದು ಸುದ್ದಿ. ಸಂಘಟಿಸಿದ್ದು ತಾಲೂಕು ಕಛೇರಿ. ಭಾಗವಹಿಸಿದ್ದು ಆಹಾರ ಇಲಾಖೆಯ ಉಪನಿರ್ದೇಶಕ ಶರಣ ಬಸಪ್ಪ, ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ದಿನಕರ ತೋನ್ಸೆ, ಭದ್ರಾ ಗ್ಯಾಸ್ ಏಜೆನ್ಸಿ ಪರವಾಗಿ ಮಂಜುನಾಥ್ … Read more
ನೇತ್ರಾವತಿಯ ಮಡಿಲಲ್ಲಿ ಬಂಟ್ವಾಳದ ಜನತೆಕುಡಿಯುವ ನೀರಿಗೆ ಯಾಕೀ ಕೊರತೆ? ರಸ್ತೆಯಂಚಿನಲ್ಲೊಂದು ಕೊಳವೆ ಬಾವಿ ಮೊಡಂಕಾಪಿನಲ್ಲಿರುವ ನಮ್ಮ ಮನೆಗೆ ಹೋಗಲು ಬಿ.ಸಿ.ರೋಡು ಪೊಳಲಿ ದ್ವಾರದ ಮೂಲಕ ಹೋಗಬೇಕು. ಇದು ನಾನು ನಿತ್ಯ ತಿರುಗಾಡುವ ದಾರಿ. 2014ರ ಡಿಸೆಂಬರ್ ಮಧ್ಯದ ಒಂದು ದಿನ ಇದ್ದಕ್ಕಿದ್ದಂತೆ ಕಾರ್ಮೆಲ್ ಕಾನ್ವೆಂಟ್ ಹತ್ತಿರ ರಸ್ತೆಯ ಬದಿಯಲ್ಲಿ ಒಂದು ಕೊಳವೆ ಬಾವಿ ಕಾಣಿಸಿಕೊಂಡಿತು. ಬಾವಿ ತೀರ ರಸ್ತೆಯ ಅಂಚಿನಲ್ಲೇ ಇತ್ತಾದ್ದರಿಂದ ಇದು ಯಾರಪ್ಪ ರಸ್ತೆಗೆ ಇಷ್ಟು ಹತ್ತಿರ ಈ ಕೆಲಸ ಮಾಡಿದವರು ಎಂಬ ಪ್ರಶ್ನೆ ಮನಸ್ಸಿಗೆ … Read more
ನೇತ್ರಾವತಿಯ ಬಾಯಿಗೆ ಮಣ್ಣು ಹಾಕಿದ ರೈಲ್ವೆ ಇಲಾಖೆ!
ಧಿಡೀರ್ ಮಣ್ಣಿನ ಸೇತುವೆ! ಕಳೆದ ತಿಂಗಳಿನಲ್ಲಿ ಬೆಂಗಳೂರಿಗೆ ಹೋಗಿದ್ದ ನಾನು ನನ್ನ ಪತ್ನಿ ಒಂದು ಶುಕ್ರವಾರದ ಹಗಲು ರೈಲಿನಲ್ಲಿ ಬಿ.ಸಿ.ರೋಡಿಗೆ ಹಿಂದೆ ಬಂದೆವು. ಮುಸ್ಸಂಜೆಯ ಹೊತ್ತಿಗೆ ರೈಲು ಬಂಟ್ವಾಳ ಮುಟ್ಟುವ ಹೊತ್ತಿಗೆ ಬಂಟ್ವಾಳ ಸ್ಟೇಷನ್ನಿನ ಸಮೀಪದ ಸೇತುವೆಯಿಂದ ಕಾಣುವ ಸುಮನೋಹರ ದೃಶ್ಯಕ್ಕಾಗಿ ಕಾಯುತ್ತಿದ್ದ ನನಗೆ ಸೇತುವೆಯ ಕೆಳಗೆ ನದಿಯ ಉದ್ದಕ್ಕೂ ಮಣ್ಣು ತುಂಬಿಸಿರುವುದು ಕಾಣಿಸಿತು. ಇದ್ಯಾವ ಬುದ್ಧಿವಂತರಪ್ಪ ನಮ್ಮೂರಿನ ನದಿಗೆ ಮಣ್ಣು ತುಂಬಿಸಿದವರು ಅಂತ ಹೊಟ್ಟೆ ತೊಳಸಿತು.ಮರುದಿನ ಕುತೂಹಲಕ್ಕಾಗಿ ಕ್ಯಾಮರಾ ಹಿಡಿದುಕೊಂಡು ಹಳಿಯ ಮೇಲೆ ನಡೆಯುತ್ತ ನದಿಯ ಹತ್ತಿರ … Read more
ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು
ಬಹಳ ದಿನಗಳಿಂದಲೂ ಎತ್ತಿನಹೊಳೆ ಯೋಜನೆಯ ಕುರಿತು ಒಂದು ಲೇಖನವನ್ನು ಬರೆಯಬೇಕೆಂದು ಯೋಚಿಸುತ್ತಲೇ ಇದ್ದೇನೆ. ದಾಖಲೆಗಳ ಕೊರತೆಯಿಂದಾಗಿ ಬರೆಯುವುದನ್ನು ಮುಂದೆ ಹಾಕುತ್ತಲೇ ಬಂದೆ. ಆದರೆ ಈಗ, ದಾಖಲೆಗಳ ಸಂಗ್ರಹ ಮುಗಿಯುವ ಕೆಲಸವಲ್ಲ ಎನ್ನಿಸುತ್ತಿದೆ. ಹಾಗಾಗಿ ಇನ್ನೂ ತಡಮಾಡುವುದು ಬೇಡ, ಇರುವಷ್ಟು ದಾಖಲೆಗಳನ್ನು ಆಧರಿಸಿ ಬರೆದುಬಿಡುವುದು, ಮುಂದೆ ದಾಖಲೆಗಳು ಸಿಕ್ಕಿದರೆ, ಅವನ್ನು ಸೇರಿಸಬಹುದು ಎಂದುಕೊಂಡು ಬರೆಯುತ್ತಿದ್ದೇನೆ. ಎತ್ತಿನಹೊಳೆಯಿಂದ ನೀರು ಸಾಗಿಸುವ ಯೋಜನೆಗೆ ಮೂಲಕಾರಣ ಮನುಷ್ಯನ ದುರಾಸೆ ಮತ್ತು ಮೂರ್ಖತನ; ಮೂಲಪ್ರೇರಣೆ ಜಿ.ಎಸ್. ಪರಮಶಿವಯ್ಯನವರ ನೇತ್ರಾವತಿ ತಿರುವು ಯೋಜನೆ. ಮೂಲಸಮಸ್ಯೆ ಇರುವುದು … Read more
ನೇತ್ರಾವತಿಯ ನೀರು: ಕೊಟ್ಟದ್ದು ಸಾಲದು – ಇನ್ನೂ ಕೊಡಿ-ಮಂಗಳೂರು ಎಸ್ ಇ ಜಡ್ ಕಂಪೆನಿ ಈಗಾಗಲೇ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ (ನೇತ್ರಾವತಿ 12.5 + ಗುರುಪುರ 2.5) ನೀರೆತ್ತಲು ಅನುಮತಿ ಪಡೆದಿರುವ ಎಂ ಎಸ್ ಇ ಜಡ್ ಕಂಪೆನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಮೊದಲೇ ನೇತ್ರಾವತಿ ನದಿಯಿಂದ ಒಟ್ಟು 27 ಎಂಜಿಡಿ ನೀರೆತ್ತಲು ಸರಕಾರದ ಮುಂದೆ ಹೊಸ ಬೇಡಿಕೆ ಮಂಡಿಸಿದೆ.(1 ಎಂಜಿಡಿ= ದಿನಕ್ಕೆ 45 ಲಕ್ಷ ಲೀಟರು).ಕಂಪೆನಿ ಈ ಬೇಡಿಕೆಯನ್ನು … Read more
ವೇದಿಕೆಯ ಪತ್ರಕ್ಕೆ ಸರ್ಕಾರದ ಸ್ಪಂದನ ಈ ದಿನ ಅಂದರೆ ೧೩-೧೧-೨೦೧೨ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರು ನೇತ್ರಾವತಿ ನದಿ ಸಂರಕ್ಷಣಾ ವೇದಿಕೆಗೆ ಕಳಿಸಿರುವ ಪತ್ರ ಹೀಗಿದೆ: ಇಂದ: ಸರ್ಕಾರದ ಕಾರ್ಯದರ್ಶಿಗಳು ಜಲಸಂಪನ್ಮೂಲ ಇಲಾಖೆ ಕರ್ನಾಟಕ ಸರ್ಕಾರ, ಬೆಂಗಳೂರು-೫೬೦೦೦೧ ಇವರಿಗೆ: ೧. ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿಶೇಷ ಆರ್ಥಿಕ ವಲಯ ಸಂಸ್ಥೆ, ನಂ. ೧೬, ಪ್ರಣವಾ ಪಾರ್ಕ್, ೩ನೇ ಮಹಡಿ, ಇನ್ ಫೆಂಟ್ರಿ ರೋಡ್, ಬೆಂಗಳೂರು-೫೬೦೦೦೧ ೨. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, … Read more
ಬಂಟ್ವಾಳ, ಮಂಗಳೂರುಗಳ ಪಾಲಿಗೆ ತಿರುಗಲಿದೆ ನೇತ್ರಾವತಿಯ ದಿಕ್ಕು! ಗೆಳೆಯ ಅನಂತಾಡಿ ಗೋವಿಂದ ಭಟ್ಟರು ಇಮೈಲಿನಲ್ಲಿ ಏನು ಕಳಿಸಿದರೂ ಜೊತೆಗೆ ಈ ಮಾತು ಇದ್ದೇ ಇರುತ್ತದೆ: ಕೊನೆಯ ಮರವನ್ನು ಕಡಿದುರುಳಿಸಿ ಆದಮೇಲೆ ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ ಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ ಆಗ, ಆಗ ನಿಮಗೆ ತಿಳಿಯುತ್ತದೆ: “ಹಣ ತಿನ್ನಲು ಬರುವುದಿಲ್ಲ”! ನಾವು ಭಾರತೀಯರು ಗಡ್ಡಕ್ಕೆ ಬೆಂಕಿ ತಾಗಿದಾಗಷ್ಟೇ ಬಾವಿ ತೋಡುವ ಪೈಕಿ. ಆದರೂ ನಾನು ಊದುವ ಶಂಖ ಊದುವುದೇ. ನೇತ್ರಾವತಿ ನದಿ … Read more
ಮೌನೀಶರ ಜೋಕುಗಳು
ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:“ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?”ಮೌನೀಶರ ಉತ್ತರ: “ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!”***ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ … Read more
ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ ಕುಂಟೆ ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಕೇಸು ಕೋರ್ಟಿಗೆ ಒಯ್ದರು ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ … Read more