ಪಂಪಭಾರತ ಆಶ್ವಾಸ ೧ ಪದ್ಯಗಳು ೧೧೫-೧೨೭

ಖಚರ ಪ್ಲುತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ |      ಭಂಗಮಂ ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ ||      ತ್ತುಂಗಮಂ ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂ |      ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ ||೧೧೫|| (ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ, ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ, ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಂ, ನೃಪನ್ ಎಯ್ದಿದನ್ ಉದ್ಯಚ್ಛೃಂಗಮನ್ ಆ ಶತಶೃಂಗಮಂ.) … Read more

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪ ಕಂ|| ಕೂರಿ[ಸೆ] ಗುರುಶುಶ್ರೂಷೆಯೊ |      ಳಾ ರಾಮನನುಗ್ರ ಪರಶುಪಾಟಿತ ರಿಪು ವಂ ||      ಶಾರಾಮನನಿಷು ವಿದ್ಯಾ |      ಪಾರಗನೆನಿಸಿದುದು ಬಲ್ಮೆ ವೈಕರ್ತನನಾ ||೧೦೪|| ತನ್ನ ಉಗ್ರವಾದ ಕೊಡಲಿಯಿಂದ ವೈರಿಗಳ ವಂಶವನ್ನೇ ನಾಶ ಮಾಡಿದ ಪರಶುರಾಮನಿಗೆ ಪ್ರೀತಿ ಹುಟ್ಟುವಂತೆ ಕರ್ಣನು ಆತನ ಸೇವೆ ಮಾಡಿ ಬಿಲ್ವಿದ್ಯೆಯಲ್ಲಿ ಪಾರಂಗತನಾದನು. (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನನ್, ಉಗ್ರ ಪರಶುಪಾಟಿತ ರಿಪು ವಂಶಾರಾಮನನ್, ಇಷು ವಿದ್ಯಾ ಪಾರಗನ್ ಎನಿಸಿದುದು ಬಲ್ಮೆ … Read more

ಪಂಪಭಾರತ ಆಶ್ವಾಸ ೧ ಪದ್ಯಗಳು ೮೬-೧೦೩ ವ|| ಅಂತು ದಿವ್ಯ ಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞಾಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗ ಸಂಗತನುಮನೇಕ ಭದ್ರ ಲಕ್ಷಣ ಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಮಂಬಿಕೆಯ ಸೂೞಾಯ್ತೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಿಂದಾಕೆಯ … Read more

ಪಂಪಭಾರತ ಆಶ್ವಾಸ ೧ ಪದ್ಯಗಳು ೭೫-೮೫ ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ |      ದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋ ||      ತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತಮೀಗಳಬ್ಬೆಯೆಂ |      ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೋ ಪಂಕಜಾನನೇ ||೭೫|| (ಅತ್ತ ಸುರೇಶ್ವರಾವಸಥಂ, ಇತ್ತ ಮಹೀತಳಂ, ಉತ್ತ ಪನ್ನಗೋದಾತ್ತ ಸಮಸ್ತ ಲೋಕಂ ಅಱಿದಂತಿರೆ ಪೂಣ್ದ  ಎನಗೆ, ಆಗದು ಅಂಗಜ ಉತ್ಪತ್ತಿ ಸುಖಕ್ಕೆ ಸೋಲಲ್ ಅೞಿಗುಂ ಪುರುಷವ್ರತಂ ಈಗಳ್ ಅಬ್ಬೆಯೆಂದು  ಅತ್ತಿಗೆಯೆಂಬ ಮಾತನ್ ಎನಗೇನ್ ಎನಲ್ ಅಕ್ಕುಮೋ ಪಂಕಜಾನನೇ?) ಅತ್ತ … Read more

ಪಂಪಭಾರತ ಆಶ್ವಾಸ ೧

ಪಂಪಭಾರತ ಆಶ್ವಾಸ ೧ ಪದ್ಯಗಳು: ೫೯ರಿಂದ ೭೪ ಕಂ|| ಜಳರುಹನಾಭನ ನಾಭಿಯ |      ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ ||      ಲ್ಲುಳಿತಾಳಿ ಜಲ[ಜ]ಮಾಯ್ತಾ |      ಜಳ[ಜ]ದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ ||೫೯|| (ಜಳರುಹನಾಭನ ನಾಭಿಯ ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋಲ್ಲುಳಿತಾಳಿ ಜಲಜಮಾಯ್ತು, ಆ  ಜಳಜದೊಳ್ ಒಗೆದಂ ಹಿರಣ್ಯಗರ್ಭ ಬ್ರಹ್ಮಂ.) ಹೊಕ್ಕುಳುಗಮಲನ (ವಿಷ್ಣುವಿನ) ಹೊಕ್ಕುಳಿನಲ್ಲಿದ್ದ ನೀರಿನ ಗುಳ್ಳೆಯಲ್ಲಿ ಸುರಭಿಯ ಪರಿಮಳದಿಂದ ಕೂಡಿದ, ದುಂಬಿಗಳು ಮುತ್ತಿ ಅಲುಗುತ್ತಿರುವ ಕಮಲವು ಉಂಟಾಯಿತು. ಆ ಕಮಲದಲ್ಲಿ ಹಿರಣ್ಯಗರ್ಭ … Read more

ಪಂಪಭಾರತಂ ಎಂಬ ವಿಕ್ರಮಾರ್ಜುನವಿಜಯಂ ಆಶ್ವಾಸ ೧ ಪದ್ಯಗಳು ೪೪ರಿಂದ ೫೮ ಕಂ|| ರುಂದ್ರಾಂಬೋಧಿಪರೀತ ಮ |      ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ ||      ದಿಂದ್ರಂ ತಾನೆನೆ ಸಲೆ ನೆಗ |      ೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ ||೪೪|| (ರುಂದ್ರ ಅಂಬೋಧಿಪರೀತ ಮಹೀಂದ್ರರ್ ಅದಾರ್ ಇನ್ನರ್? ಈ ನರೇಂದ್ರಂ ಸಾಕ್ಷಾತ್ ಇಂದ್ರಂ ತಾನ್ ಎನೆ ಸಲೆ ನೆಗೞ್ದು, ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ.) ಕಡಲಿನವರೆಗೂ ವ್ಯಾಪಿಸಿರುವ ಈ ಭೂಮಿಯಲ್ಲಿ ಅರಿಕೇಸರಿಯಂಥ ರಾಜರು ಬೇರೆ ಯಾರು ತಾನೇ … Read more

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧೫-೪೩ ಕಂ|| ಶ್ರೀಮಚ್ಚುಳಕ್ಯ ವಂಶ |      ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ ||      ಡೀ ಮಹಿಯೊಳಾತ್ಮ ವಂಶ ಶಿ |      ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ ||೧೫|| (ಶ್ರೀಮತ್ ಚಳುಕ್ಯ ವಂಶ ವ್ಯೋಮ ಅಮೃತ ಕಿರಣನ್ ಎನಿಪ ಕಾಂತಿಯನ್ ಒಳಕೊಂಡು, ಈ ಮಹಿಯೊಳ್ ಆತ್ಮ ಶಿಖಾಮಣಿ ಜಸಂ ಎಸೆಯೆ ಯುದ್ಧಮಲ್ಲಂ ನೆಗೞ್ದಂ.) ಇಲ್ಲಿಂದ ಮುಂದಕ್ಕೆ ಅರಿಕೇಸರಿಯ ವಂಶವೃತ್ತಾಂತ: ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನಂತೆ, ಆ ವಂಶದ ಶಿಖಾಮಣಿಯಂತೆ, ಈ ಭೂಮಿಯಲ್ಲಿ ಯುದ್ಧಮಲ್ಲನು … Read more

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧-೧೪

ಶ್ರೀಃ ಪಂಪಕವಿ ವಿರಚಿತಂ ವಿಕ್ರಮಾರ್ಜುನ ವಿಜಯಂ ಪ್ರಥಮಾಶ್ವಾಸಂ  ಉ|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ |      ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ||      ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ |      ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ ||೧|| (ಶ್ರೀಯನ್ ಅರಾತಿ ಸಾಧನ ಪಯೋನಿಧಿಯೊಳ್ ಪಡೆದುಂ, ಧರಿತ್ರಿಯಂ ಜೀ ಎನೆ ಬೇಡಿ ಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿ ಕೊಂಡುಂ, ಆತ್ಮೀಯ ಸುಪುಷ್ಪಪಟ್ಟಮನ್ ಒಡಂಬಡೆ ತಾಳ್ದಿಯುಂ, ಇಂತು ಉದಾತ್ತ ನಾರಾಯಣನಾದ … Read more

ಎತ್ತಿನಹೊಳೆ ಕುರಿತ ಬೆಂಗಳೂರು ಸಭೆ: ಪಶ್ಚಿಮಘಟ್ಟ ಇನ್ನೂ ಅಪಾಯದತ್ತ?ಮೊನ್ನೆ ಶನಿವಾರ (ತಾ. 19-02-2016) ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಸಭೆ ಬೆಂಗಳೂರಿನಲ್ಲಿ ನಡೆಯಿತು. ಹಿಂದಿನ ದಿನ ಈ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ್ದೆ. ಭಾಗವಹಿಸುವ ತಜ್ಞರ ಹೆಸರುಗಳನ್ನು ಕಂಡು, ಅವರೆಲ್ಲ ಏನು ಹೇಳುತ್ತಾರೆನ್ನುವುದನ್ನು ಕೇಳಲೇಬೇಕು ಅನ್ನಿಸಿದ್ದರಿಂದ ಸಭೆಗೆ ನಾನೂ ಹೋದೆ.ಡಾ. ಮಧುಸೀತಪ್ಪನವರ ಹೆಸರು ಬಯಲುಸೀಮೆಯ “ಶಾಶ್ವತ ನೀರಾವರಿ ಹೋರಾಟ”ಕ್ಕೆ ಬಲವಾಗಿ ತಳುಕು ಹಾಕಿಕೊಂಡಿದೆ. ದ.ಕ.ದ ಭಾಗದಲ್ಲೂ ಎತ್ತಿನಹೊಳೆ ಯೋಜನೆಯ ಕುರಿತ ಹೋರಾಟ, ಅಧ್ಯಯನಗಳಲ್ಲಿ ತೊಡಗಿಕೊಂಡವರಿಗೆ ಅವರ ಹೆಸರು ಪರಿಚಿತವಾದದ್ದು. (ಎತ್ತಿನಹೊಳೆ … Read more

ಎತ್ತಿನಹೊಳೆ: ಕನೀನಿನಿ ಉತ್ತರಿಸಬೇಕಾದ ಹಲವು ಸಂದೇಹಗಳು ಸಹ್ಯಾದ್ರಿ ಸಂಚಯ ಮತ್ತಿತರ ಹಲವು ಸಂಘಟನೆಗಳು ಹಟ ಕಟ್ಟಿ ಎತ್ತಿನಹೊಳೆ ಯೋಜನೆಯ ವಿರುದ್ಧ ದೊಡ್ಡ ಹೋರಾಟವನ್ನು ಸಂಘಟಿಸಿದ್ದು ಎಲ್ಲರಿಗೂ ತಿಳಿದ ಸಂಗತಿ. ಸಹ್ಯಾದ್ರಿ ಸಂಚಯವು ಹತ್ತು ಪ್ರಶ್ನೆಗಳನ್ನು ರಾಜಕಾರಣಿಗಳಿಗೂ, ತಜ್ಞರಿಗೂ ಕೇಳಿತ್ತು. ಈ ಪ್ರಶ್ನೆಗಳಿಗೆ ಅವರು ಸೆಪ್ಟೆಂಬರ್ 19 ರ ಸಂಜೆ ನಾಲ್ಕಕ್ಕೆ ಮಂಗಳೂರಿನ ರೋಶನಿ ನಿಲಯದಲ್ಲಿ ನಡೆಯುವ ಸಭೆಯಲ್ಲಿ ಉತ್ತರಿಸಬೇಕಾಗಿತ್ತು. ಯು.ಟಿ. ಖಾದರ್ ಅವರು ಕರ್ನಾಟಕ ನೀರಾವರಿ ನಿಗಮ ನಿಯಮಿತದವರಿಂದ ಈ ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ಪಡೆದು ಅಂದಿನ … Read more